- ತೈಲ ಮಾರುಕಟ್ಟೆ ಕಂಪನಿಗಳು LPG ಬಳಕೆದಾರರಿಗೆ ಗುಡ್ ನ್ಯೂಸ್
- ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ 69.50 ರೂಪಾಯಿ ಕಡಿಮೆ
ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು LPG ಬಳಕೆದಾರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಲೋಕಸಭ ಚುನಾವಣೆ ಮೊದಲಾದ ಬಳಿಕ ಇದು ಮೂರನೇ ಬಾರಿ ಬೆಲೆ ಇಳಿಕೆಯಾಗಿರುವುದು. ತೈಲ ಮಾರುಕಟ್ಟೆ ಕಂಪನಿಗಳು ಜೂನ್ 1 ರಿಂದ ದೇಶದ ವಿವಿಧ ನಗರಗಳಲ್ಲಿ ಎಲ್ಪಿಜಿ ಸಿಲಿಂಡರ್ (Commercial LPG Gas Cylinders)ಗಳ ಬೆಲೆಯಲ್ಲಿ 69.50 ರೂಪಾಯಿ ಕಡಿಮೆ ಆಗಲಿದೆ.
ಇದರೊಂದಿಗೆ ದೆಹಲಿಯಲ್ಲಿ 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ 1676 ರೂ.ಗೆ ಇಳಿದಿದೆ. ಏಪ್ರಿಲ್ನಲ್ಲಿ 19 ರೂಪಾಯಿ ಇಳಿಕೆಯಾಗಿ 1745.50 ರೂಪಾಯಿಗೆ ಇಳಿದಿತ್ತು. ಮುಂಬೈನಲ್ಲಿ 1,629 ರೂಪಾಯಿ, ಚೆನ್ನೈನಲ್ಲಿ 1,840.50ಗೆ ಕಮ್ಮಿಯಾಗಿದೆ. ಇನ್ನು ಬೆಂಗಳೂರಲ್ಲಿ 1,813 ರೂಪಾಯಿ ಆಗಿದೆ. ದೇಶಾದ್ಯಂತ ಮೆಟ್ರೋ ನಗರಗಳಿಗೂ ಇದು ಅನ್ವಯವಾಗಿದೆ.