- ನನ್ನ, ಸಿದ್ದರಾಮಯ್ಯ ಎಂದು ಹೇಳಿಕೆ ನೀಡಿದ್ದ ಡಿಕೆ ಶಿವಕುಮಾರ್
- ಯಾವುದೇ ಶತ್ರು ಭೈರವಿ ಯಾಗ, ಪ್ರಾಣಿ ಬಲಿ ನಡೆದಿಲ್ಲ ಎಂದ ಕೇರಳ ಸರ್ಕಾರ
ಮಂಗಳೂರು : ಕೇರಳದ ರಾಜರಾಜೇಶ್ವರಿ ದೇವಾಲಯ ಆವರಣದಲ್ಲಿ ನನ್ನ, ಸಿದ್ದರಾಮಯ್ಯ ಮತ್ತು ನಮ್ಮ ಸರ್ಕಾರದ ವಿರುದ್ಧ ಶತ್ರು ಭೈರವಿ ಯಾಗ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ಈ ಕುರಿತು ತನಿಖೆ ನಡೆಸಿದ ಕೇರಳ ಸರ್ಕಾರ ತಳಿಪರಂ ರಾಜರಾಜೇಶ್ವರಂ ಹಾಗೂ ಕಣ್ಣೂರು ಸುತ್ತಮುತ್ತ ಪ್ರದೇಶದಲ್ಲಿ ಯಾವುದೇ ರೀತಿಯ ಶತ್ರು ಭೈರವಿ ಯಾಗ, ಪ್ರಾಣಿ ಬಲಿ ನಡೆದಿಲ್ಲವೆಂದು ಸ್ಪಷ್ಟನೆ ನೀಡಿದೆ.
ಈ ಸಂಬಂಧ ಕೇರಳ ಸರ್ಕಾರ ಗುಪ್ತಚರ ಹಾಗೂ ಪೊಲೀಸ್ ಇಲಾಖೆ ಮೂಲಕ ಕಣ್ಣೂರು, ತಳಿಪರಂಬ ಭಾಗದಲ್ಲಿ ವಿಶೇಷ ತನಿಖೆ ನಡೆಸಿದ್ದು, ತನಿಖೆ ನಡೆಸಿದ ತನಿಖಾ ದಳ ಕೇರಳದ ಡಿಜಿಪಿ ಅವರಿಗೆ ವರದಿ ಸಲ್ಲಿಸಿದೆ. ವರದಿಯಲ್ಲಿ ಯಾವುದೇ ಶತ್ರು ಭೈರವಿ ಯಾಗ, ಪ್ರಾಣಿ ಬಲಿ ಯಾಗ ನಡೆದಿಲ್ಲ ಎಂದು ವರದಿಯಾಗಿದೆ.