- ಟಿ-20 ವರ್ಲ್ಡ್ಕಪ್ ಅಭ್ಯಾಸ ಪಂದ್ಯದಲ್ಲಿ ಭಾರತ-ಬಾಂಗ್ಲಾದೇಶ ತಂಡಗಳು ಕಣಕ್ಕೆ
- ಪ್ರಾಕ್ಟೀಸ್ ಮ್ಯಾಚ್ ನಲ್ಲಿ ಕೊಹ್ಲಿ ಗೈರಾಗುವ ಸಾಧ್ಯತೆ
ನ್ಯೂಯಾರ್ಕ್: ಇಂದು ನಡೆಯಲಿರುವ ಟಿ-20 ವರ್ಲ್ಡ್ಕಪ್ ಅಭ್ಯಾಸ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಕಣಕ್ಕಿಳಿಯಲಿದೆ. ಭಾರತ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ ಬಾಂಗ್ಲಾ ವಿರುದ್ಧದ ಮ್ಯಾಚ್ನಲ್ಲಿ ಆಡೋದು ಡೌಟು ಎನ್ನಲಾಗುತ್ತಿದೆ.
ಟಿ-20 ವರ್ಲ್ಡ್ಕಪ್ ಸ್ಟಾರ್ಟ್ ಆಗಲೂ ಇನ್ನು ಕೇವಲ ಒಂದೇ ದಿನ ಮಾತ್ರ. ಇದೆ ಸಂಡೇ ಚುಟುಕು ಕ್ರಿಕೆಟ್ ಹಬ್ಬ ಪ್ರಾರಂಭವಾಗಲಿದೆ. ಅದಕ್ಕೂ ಮುಂಚೆ ಭಾರತ ತಂಡದ ಸ್ಟಾರ್ ಆಟಗಾರ ವಿರಾಟ್ ಟೀಂ ಅನ್ನು ಸೇರಿಕೊಂಡಿದ್ದಾರೆ. ಇದೆ ಶುಕ್ರವಾರ ನೂಯಾರ್ಕ್ಗೆ ಆಗಮಿಸಿದ ಅವರು ನೇರವಾಗಿ ಭಾರತೀಯ ಕ್ರಿಕೆಟ್ ತಂಡದ ಶಿಬಿರವನ್ನು ಸೇರಿಕೊಂಡರು. ಅದಾಗ್ಯೂ ಅವರು ಇಂದು ಕಣಕ್ಕಿಳಿಯುವ ಸಾಧ್ಯತೆಯಿಲ್ಲ ಎನ್ನಲಾಗುತ್ತಿದೆ.
ಭಾರತ ಮತ್ತು ಬಾಂಗ್ಲಾ ವಿರುದ್ಧದ ಪ್ರಾಕ್ಟೀಸ್ ಮ್ಯಾಚ್ ಇಂದು ನಡೆಯಲಿದ್ದು, ಈ ಪಂದ್ಯಕ್ಕೆ ಕೊಹ್ಲಿ ಗೈರಾಗುವ ಸಾಧ್ಯತೆಯಿದೆ. ದೂರದ ಜರ್ನಿ ಸಲುವಾಗಿ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಶನಿವಾರ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಅವರು ಕಾಣಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ.
ವಿರಾಟ್ ಇದಕ್ಕೂ ಮುನ್ನ, ಅಂದರೆ ಮೇ 26ಕ್ಕೆಲ್ಲಾ ಭಾರತೀಯ ಆಟಗಾರರು ವಿಶ್ವಕಪ್ಗಾಗಿ ಅಮೆರಿಕಾಗೆ ತೆರಳಿದ್ದರು. ಆದರೆ ವೀಸಾ ಪೇಪರ್ ವರ್ಕ್ಗಳ ವಿಳಂಬವಾದ ಕಾರಣ ಕೊಹ್ಲಿ ತಂಡ ಸೇರಿಕೊಳ್ಳುವಿಕೆ ಸ್ವಲ್ಪ ಲೇಟ್ ಆಯ್ತು. ಇದೀಗ 5 ದಿನಗಳ ಬಳಿಕ ಕಿಂಗ್ ಕೊಹ್ಲಿ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ.
ಭಾರತ ಟಿ-20 ವರ್ಲ್ಡ್ಕಪ್ನ ಸಂಭಾವ್ಯ ತಂಡ:
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
ಮೀಸಲು ಆಟಗಾರರು: ಶುಭ್ಮನ್ ಗಿಲ್, ಅವೇಶ್ ಖಾನ್, ರಿಂಕು ಸಿಂಗ್, ಖಲೀಲ್ ಅಹ್ಮದ್.