ನ್ಯೂಯಾರ್ಕ್: ಮೂಲತಃ ದಾವಣಗೆಯವರಾದ ಶ್ರೇಯಸ್ ಮೋವಾ ಟಿ-20 ವಿಶ್ವಕಪ್ನ ಕೆನಡಾ ತಂಡವನ್ನಾ ಪ್ರತಿನಿಧಿಸಲಿದ್ದಾರೆ.
ಇದೇ ಜೂನ್ ೨ ರಿಂದ ಅಮೆರಿಕಾ ಹಾಗೂ ವೆಸ್ಟ್ ಇಂಡಿಸ್ನಲ್ಲಿ ಜಂಟಿಯಾಗಿ ನಡೆಯಲಿರುವ, ಚುಟುಕು ಕ್ರಿಕೆಟ್ನಲ್ಲಿ ಶ್ರೇಯಸ್ ಮೋವಾ ಆಡಲಿದ್ದಾರೆ. ಅವರು 2006 ರಿಂದ 2016ರ ವರೆಗೆ ದಾವಣಗೆರೆಯ ಅಕಾಡೆಮಿವೊಂದರಲ್ಲಿ ತರಬೇತಿ ಪಡೆದಿದ್ದರು. ನಗರದ ಬಿಐಇಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು, ಉನ್ನತ ಶಿಕ್ಷಣಕ್ಕಾಗಿ ಕೆನಡಾಗೆ ತೆರಳಿದ್ದರು. ಕೆನಡಾದಲ್ಲಿಯೂ ಕೂಡಾ ಅವರು ತಮ್ಮ ಕ್ರಿಕೆಟ್ನ ಇಂಟ್ರೆಸ್ಟ್ ಬಿಡದೇ ಈಗ ಅಲ್ಲಿನ ವರ್ಲ್ಡ್ಕಪ್ ತಂಡಕ್ಕೆ ಆಯ್ಕೆ ಆಗಿದ್ದಾರೆ.
ಇವರು ರಾಜ್ಯ ಕ್ರಿಕೆಟ್ ಸಂಸ್ಥೆಯ ಅಂಡರ್-16 ಹಾಗೂ ಅಂಡರ್-19 ಟೂರ್ನಿಗಳಲ್ಲು ಆಟ ಆಡಿದ್ದಾರೆ. ತುಮಕೂರು ಕ್ರಿಕೆಟ್ ವಲಯದ ಸಂಚಾಲಕ ಶಶಿಧರ್ ನೇತೃತ್ವದ ವಿನಸ್ ಕ್ರಿಕೆಟ್ ತಂಡವನ್ನು ಸಹ ಬಹಳ ವರ್ಷ ಪ್ರತಿನಿಧಿಸಿದ್ದರು. ಭಾರತ ತಂಡವು ಇದೆ ಜೂನ್ 15 ಕ್ಕೆ ಕೆನಡಾ ವಿರುದ್ಧ ಸೆಣಸಾಡಲಿದೆ. ಆದರೆ ಅವರ ಪೋಷಕರು, ಕೋಚ್ಗಳು ಟೀಮ್ ಇಂಡಿಯಾ ಗೆಲ್ಲಲ್ಲಿ. ನಮ್ಮ ಮಗ ಚೆನ್ನಾಗಿ ಆಡಲಿ ಎಂದು ಪ್ರಾರ್ಥಿಸುತ್ತಿದ್ದಾರೆ.