ಈಗಾಗಲೇ ಟಿ20 ವಿಶ್ವಕಪ್ ಪ್ರಾರಂಭಗೊಂಡಿದ್ದು ಭಾರತ ತಂಡ ಇದುವರೆಗೂ ಒಂದು ಮ್ಯಾಚನ್ನು ಆಡಿಲ್ಲ. ಕಳೆದ ಏಕದಿನ ವಿಶ್ವಕಪ್ನಲ್ಲಿ ಫೈನಲ್ ಹಂತದ ವರೆಗೂ ಬಂದು ಕಪ್ ಗೆಲ್ಲದ ಟೀಮ್ ಇಂಡಿಯಾ ಈ ಬಾರಿಯ ಟಿ20 ವಿಶ್ವಕಪ್ನ್ನಾದರೂ ಗೆಲ್ಲುತ್ತಾ ಎಂದು ಕಾದು ನೋಡಬೇಕಿದೆ. ಈಗಾಗಲೇ ವಿಶ್ವದ ಬಲಿಷ್ಠ ತಂಡವಾಗಿ ಹೊರ ಹೊಮ್ಮಿರುವ ಭಾರತ ತಂಡದ ಆಟವನ್ನು ನೋಡಲು ಕ್ರೀಡಾಭಿಮಾನಿಗಳು ಹಾತೊರಿಯುತ್ತಿದ್ದಾರೆ. ಹಾಗಾದರೆ ಟೀಮ್ ಇಂಡಿಯಾದ ಮ್ಯಾಚ್ಗಳು ಯಾವಾಗ ಯಾವ್ಯಾವ ತಂಡಗಳ ಜೊತೆ ಆಡಲಿದೆ. ಎಲ್ಲಿ ಯಾವಾಗ ಅನ್ನುವದರ ಸಂಪೂರ್ಣ ವೇಳಾಪಟ್ಟಿ ಹೀಗಿದೆ…..!
2024ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ವೇಳಾಪಟ್ಟಿ, ಇಂತಿವೆ:
ಜೂನ್ 5 (ಬುಧವಾರ): ಭಾರತ vs ಐರ್ಲೆಂಡ್ ಪಂದ್ಯವು ನ್ಯೂಯಾರ್ಕ್ನಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ.
ಜೂನ್ 9 (ಭಾನುವಾರ): ಭಾರತ vs ಪಾಕಿಸ್ತಾನ ಪಂದ್ಯವು ನ್ಯೂಯಾರ್ಕ್ನಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ.
ಜೂನ್ 12 (ಬುಧವಾರ): ಭಾರತ vs ಯುಎಸ್ಎ ಪಂದ್ಯವು ನ್ಯೂಯಾರ್ಕ್ನಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ.
ಜೂನ್ 15 (ಶನಿವಾರ): ಭಾರತ vs ಕೆನಡಾ ಪಂದ್ಯವು ಫ್ಲೋರಿಡಾದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಾರಂಭವಾಗುತ್ತದೆ.
ಇನ್ನು ಭಾರತ ತಂಡ ಸೂಪರ್8ಗೆ ಅರ್ಹತೆ ಪಡೆದರೆ, ಮುಂದಿನ ತಮ್ಮ ಪಂದ್ಯಗಳನ್ನು ಜೂನ್ 20, ಜೂನ್ 22 ಮತ್ತು ಜೂನ್ 24ರಂದು ಆಡಲಿದೆ.
ಭಾರತ ತಂಡವು A1 ಆಗಿದೆ ಮತ್ತು ಗುಂಪು ಹಂತದಲ್ಲಿ ಯಾವ ಸ್ಥಾನದಲ್ಲಿ ಮುಗಿಸಿದರೂ, ಅವರ ಶ್ರೇಯಾಂಕವು ಬದಲಾಗುವುದಿಲ್ಲ. ಭಾರತ ಕೇವಲ ಸೂಪರ್ 8ಗೆ ಅರ್ಹತೆ ಪಡೆಯಬೇಕಾಗಿದೆ. ಈ ಬಾರಿಯ ವಿಶ್ವಕಪ್ನಲ್ಲಿ ಭಾರತ ಗುಂಪು ಹಂತದ ಪಂದ್ಯಗಳಲ್ಲಿ ತನ್ನ ಬದ್ಧ ವೈರಿ ಪಾಕಿಸ್ತಾನನೊಂದಿಗೆ ಜೂನ್ 9ರಂದು ನ್ಯೂಯಾರ್ಕ್ನಲ್ಲಿ ಸೆಣಸಾಡಲಿದೆ. ಅದಲ್ಲದೇ ಕ್ರಿಕೆಟ್ ಲೋಕಕ್ಕೆ ಹೊಸದಾಗಿ ಪರಿಚಯವಾದ ತಂಡಗಳೊಂದಿಗೆ ಆಡಬೇಕಿದೆ