2024 ಲೋಕಸಭಾ ಚುನಾವಣಾ ಫಲಿತಾಂಶ : ಲೋಕಸಭಾ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು ಬಿಜೆಪಿ ಮತ್ತೊಮ್ಮೆ ಗೆಲುವಿನತ್ತ ದಾಪುಗಾಲು ಇಡುತ್ತಿದೆ.
ಆದರೆ ಎನ್ಡಿಎ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಹಿನ್ನಡೆಯಲ್ಲಿದ್ದಾರೆ. ಚುನಾವಣಾ ಆಯೋಗದ ಪ್ರಕಾರ ವಾರಣಾಸಿ ಕ್ಷೇತ್ರದಲ್ಲಿ ನರೇಂದ್ರ ಮೋದಿ ಅವರು ಎದುರಾಳಿ ಅಜಯ್ ರೈಗಿಂತ 6223 ಮತಗಳ ಹಿನ್ನಡೆಯಲ್ಲಿದ್ದಾರೆ.. ಮೋದಿ ಹಿನ್ನಡೆ ಅಂಕಿಅಂಶಗಳು ಆಶ್ಚರ್ಯಕರವಾಗಿದೆ.
ಆದರೆ ಇದು ಸದ್ಯದ ಅಂಕಿ ಅಂಶ ಆಗಿದ್ದು ಕೆಲವೇ ಕ್ಷಣಗಳಲ್ಲಿ ಮುನ್ನಡೆ ಹಿನ್ನಡೆ ಬದಲಾಗಬಹುದು