ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ ಅವರು, ಮೋದಿಗೆ ಪ್ರೈಮಿನಿಸ್ಟರ್ ಆಗೋಕೆ ರೈಟ್ಸ್ ಇಲ್ಲ. ಮಾರಲ್ ಆಗಿ ಹೇಳೋಕೆ ಹೊರಟ್ರೆ, ಎಲ್ಲಾ ರೀತಿಯ ಚೀಫ್ ಮಿನಿಸ್ಟರ್ಗಳಿಗೆ ಜೈಲಿಗೆ ಕಳಿಸಿದ್ರು, ಹೆದರಿಸಿದ್ರು, ಬೆದರಿಸಿದ್ರು. ಧರ್ಮದ ಆಧಾರದ ಮೇಲೆ, ಜಾತಿ ಆಧಾರದ ಮೇಲೆ ವೋಟ್ ಕೇಳಿದ್ರು. ಇನ್ನೂ ಅಯೋಧ್ಯೆಯಲ್ಲಿ ಇವರು ಒಬ್ರೆ ಹೋಗಿ ಪೂಜೆ ಮಾಡಿದ್ರಲ್ಲ, ಅಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದಾರೆ ಎಂದು ಮಾತಿನಲ್ಲೇ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟಿಕಿದರು.
ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಮೋಹನ್ ಭಾಗವತಾರ್ ಹಾಗೂ ಮೋದಿ ಇಬ್ಬರೇ ಹೋಗಿ ಪೂಜೆ ಮಾಡಿದ್ದರು. ಆದ್ರೂ ಕೂಡ ಅಲ್ಲಿ ಬಿಜೆಪಿ ಸೋತಿದೆ. ಒಟ್ನಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.