ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ವೈವಾಹಿಕ ಜೀವನದ ಡಿವೋರ್ಸ್ ಸುದ್ದಿ ಈಗಾಗಲೇ ಹರಿದಾಡಿತ್ತು. ಸರ್ಬಿಯಾ ಪತ್ನಿ ನತಾಶಾ ಸ್ಟಾಂಕೋವಿಕ್ಗೆ ಡಿವೋರ್ಸ್ ನೀಡಿದ್ದಾರೆ ಎನ್ನಲಾಗಿತ್ತು. ಅದಕ್ಕೆ ತಕ್ಕಂತೆ ಈ ಜೋಡಿಯು ಸಾಮಾಜಿಕ ಜಾಲತಾಣದಲ್ಲಿ ಮದುವೆ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದನ್ನೆಲ್ಲಾ ಗಮನಿಸಿದ ಫ್ಯಾನ್ಸ್ ಇಬ್ಬರ ನಡುವಿನ ಸಂಬಂಧಕ್ಕೆ ಬ್ರೇಕ್ ಬಿದ್ದಿದೆ ಅಂದುಕೊಂಡಿದ್ದರು. ಆದರೆ ಫ್ಯಾನ್ಸ್ ಅಂದುಕೊಂಡಿರುವುದು ಸುಳ್ಳಾಗಿದೆ. ನತಾಶಾ ಸ್ಟಾಂಕೋವಿಕ್ ಹಾರ್ದಿಕ್ ಜೊತೆಗಿನ ವಿವಾಹದ ಫೋಟೋವನ್ನು ಇನ್ಸ್ಟಾದಲ್ಲಿ ಮತ್ತೆ ಹಂಚಿಕೊಂಡಿದ್ದಾರೆ. ಆ ಮೂಲಕ ಹಳೆಯ ಬ್ರೇಕಿಂಗ್ ಸ್ಟೋರಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಸೆರ್ಬೀಯಾದವಳಾದ ನತಾಶಾ ಸ್ಟಾಂಕೋವಿಕ್ ಅವರು ಹಾರ್ದಿಕ್ ಪಾಂಡ್ಯಗೆ 2018 ರಲ್ಲಿ ಪರಿಚಯವಾಗಿದ್ದು, ಮುಂಬೈನ ನೈಟ್ಕ್ಲಬ್ನಲ್ಲಿ ಇಬ್ಬರು ಜೊತೆಯಾದರು. ನಂತರ ಇಬ್ಬರ ನಡುವೆ ಸಂಪರ್ಕ ಬೆಳೆದು, ಪರಿಚಯ ಸ್ನೇಹವಾಗಿ ಹಾರ್ದಿಕ್ , ನತಾಶಾ ನಡುವಿನ ಒಡನಾಟ ಜಾಸ್ತಿಯಾಯಿತು. ಕೊನೆಗೆ 2019ರಲ್ಲಿ ಹಾರ್ದಿಕ್ ತನ್ನ ಇನ್ಸ್ಟಾದಲ್ಲಿ ‘ಬೆಸ್ಟ್ ಫ್ರೆಂಡ್’ಎಂದು ಎತ್ತಿತೋರಿಸಿದರು.
2020ರಲ್ಲಿ ಹಾರ್ದಿಕ್ ಆಕೆಗೆ ಪ್ರಪೋಸ್ ಮಾಡಬೇಕು ಎಂದು ಬಯಸಿದ್ದ ಹಾರ್ದಿಕ್, ಅದರಂತೆಯೇ ಜನವರಿ 1 ರಂದು ಹಾರ್ದಿಕ್ ಆಕೆಗೆ ಪ್ರಪೋಸ್ ಮಾಡಿದ್ದರು. ಬಳಿಕ ಅದೇ ವರ್ಷ ಮೇ ತಿಂಗಳಿನಲ್ಲಿ ನತಾಶಾ ಗರ್ಭಿಣಿಯಾಗಿದ್ದು, ಅಗಸ್ತ್ಯ ಎಂಬ ಮುಂದಾದ ಮಗನನ್ನು ಜುಲೈ ತಿಂಗಳಿನಲ್ಲಿ ಬರಮಾಡಿಕೊಂಡರು. ನಂತರ ಹಾರ್ದಿಕ್ ಮತ್ತು ನತಾಶಾ ಇಬ್ಬರು ಸಾಂಪ್ರದಾಯಿಕವಾಗಿ ಫೆಬ್ರವರಿ 14, 2023ರಂದು ಉಯದಪುರದಲ್ಲಿ ವಿವಾಹವಾದರು.