ಮುಂಬೈನ ವಾಯುವ್ಯ ಕ್ಷೇತ್ರದ ಶಿವಸೇನೆಯ ಶಿಂಧೆ ಬಣದ ಅಭ್ಯರ್ಥಿ ರವೀಂದ್ರ ವಾಕಿಕರ್ 48 ಮತಗಳ ಅಂತರದಿಂದ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಯಕ ಅಮೋಲ್ ಕೀರ್ತಿಕಾರ್ ಅವರನ್ನು ಪರಾಭವಗೊಳಿಸಿದ್ದಾರೆ. ಮೊದಲು ಅಮೋಲ್ ಕೀರ್ತಿಕಾರ್ ಅವರು ಒಂದು ಮತಗಳ ಅಂತರದಲ್ಲಿ ಗೆದ್ದಿದ್ದರು ಎಂದು ಘೋಷಿಸಲಾಗಿತ್ತು. ಬಳಿಕ ಚುನಾವಣಾ ಸಿಬ್ಬಂದಿಗಳು ಮರು ಮತ ಎಣಿಕೆಯನ್ನು ನಡೆಸಿದ್ದು, ಅದರಲ್ಲಿ ಶಿಂಧೆ ಬಣದ ಅಭ್ಯರ್ಥಿ ರವೀಂದ್ರ 48 ಮತಗಳ ಅಲ್ಪ ಅಂತರದಲ್ಲಿ ಗೆದ್ದಿದ್ದಾರೆ. ಇದು ದೇಶದಲ್ಲಿಯೇ ಅತಿ ಕಡಿಮೆ ಅಂತರದಲ್ಲಿ ಗೆದ್ದ ಗೆಲುವಾಗಿದೆ.