ಪೋರ್ಚುಗಲ್: ಈಗಿನ ಕಾಲದಲ್ಲಿ ಒಂದೇ ಮದುವೆಯಾಗಿ ಜೀವನ ನಡೆಸಲು ಪರದಾಡುತ್ತಾರೆ. ಅದು ಬಿಡಿ ಹೋಗಲಿ ಈಗಂತು ಮದುವೆ ಮಾಡಿಕೊಳ್ಳಬೇಕು ಅಂದರೆ ಒಂದು ಗಂಡಿಗೆ ಹೆಣ್ಣು ಸಿಗೋದೆ ಕಷ್ಟ ಆಗಿದೆ. ಈತಂಹ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ಮೀಡಿಯಾ ಮೊಗಲ್ ಎಂದೇ ಖ್ಯಾತರಾಗಿರುವ ಲೆಜೆಂಡರಿ ಉದ್ಯಮಿ ರೂಪರ್ಟ್ ಮುರ್ಡೋಕ್ ಅವರು ತಮ್ಮ 93ನೇ ವಯಸ್ಸಿನಲ್ಲಿ ಐದನೇ ವಿವಾಹವಾಗಿದ್ದಾರೆ.
ಇವರ ನಡುವೆ ನಡುವೆ ಸುಮಾರು 26 ವರ್ಷಗಳ ವ್ಯತ್ಯಾಸವಿದೆ. ಎಲೆನಾ ನಿವೃತ್ತ ಜೀವಶಾಸ್ತ್ರಜ್ಞೆ. ಈ ವೃದ್ಧ ದಂಪತಿ ಕಳೆದ ಒಂದು ವರ್ಷದಿಂದ ಡೇಟಿಂಗ್ ನಡೆಸುತ್ತಿದ್ದು, ಇದೀಗ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಅಮೆರಿಕದ ಫುಟ್ಬಾಲ್ ತಂಡದ ‘ನ್ಯೂ ಇಂಗ್ಲೆಂಡ್ ಪೇಟ್ರಿಯಾಟ್ಸ್’ ಮಾಲೀಕ ರಾಬರ್ಟ್ ಕ್ರಾಫ್ಟ್ ಮತ್ತು ಅವರ ಪತ್ನಿ ಡಾನಾ ಬ್ಲೂಮ್ಬರ್ಗ್ ಅವರ ವಿವಾಹದಲ್ಲಿ ಭಾಗವಹಿಸಿದ್ದರು. ಇದು ಮುರ್ಡೋಕ್ ಅವರ ಐದನೇ ವಿವಾಹವಾಗಿದೆ. ಈಗಾಗಲೇ ಮಾಜಿ ಪತ್ನಿಯರಿಂದ ಆರು ಮಕ್ಕಳನ್ನು ಹೊಂದಿರುವ ಮುರ್ಡೋಕ್.
ಮುರ್ಡೋಕ್ ಮೊದಲು ಆಸ್ಟ್ರೇಲಿಯನ್ ಫ್ಲೈಟ್ ಅಟೆಂಡೆಂಟ್ ಪೆಟ್ರೀಷಿಯಾ ಬುಕರ್ ಅವರನ್ನು ವಿವಾಹವಾದರು. ಅವರು 1960 ರಲ್ಲಿ ವಿಚ್ಛೇದನ ಪಡೆದರು. ಅದರ ನಂತರ, ಅವರು ಪತ್ರಿಕೆಯ ವರದಿಗಾರ ಅನ್ನಾ ಟೋರ್ವ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು ಮತ್ತು ಅವರು 30 ವರ್ಷಗಳ ಕಾಲ ಒಟ್ಟಿಗೆ ಇದ್ದು, 1999 ರಲ್ಲಿ ತಮ್ಮ ಎರಡನೇ ಪತ್ನಿಗೆ ವಿಚ್ಛೇದನ ನೀಡಿದರು. ಬಳಿಕ 2013 ರಲ್ಲಿ ತಮ್ಮ ಮೂರನೇ ಪತ್ನಿ ವೆಂಡಿ ಡೆಂಗ್ಗೆ ವಿಚ್ಛೇದನ ನೀಡಿದರು. 2016 ರಲ್ಲಿ, ರೋಲಿಂಗ್ ಸ್ಟೋನ್ಸ್ ಫ್ರಂಟ್ಮ್ಯಾನ್ ಮಿಕ್ ಜಾಗರ್ ಅವರು ಮಾಜಿ ಪತ್ನಿ ಮಾಡೆಲ್ ಜೆರ್ರಿ ಹಾಲ್ (65) ಅವರನ್ನು ನಾಲ್ಕನೇ ಬಾರಿಗೆ ವಿವಾಹವಾದರು.
6 ವರ್ಷಗಳ ನಂತರ ಅವರ ರಿಲೆಷನ್ ಶೀಪ್ ಕೊನೆಗೊಂಡಿತು. ಇದೀಗ 5ನೇ ಮದುವೆಯಾದ ಝುಕೋವಾ ಮುರ್ಡೋಕ್ ಅವರನ್ನು ಅವರ ಮಾಜಿ ಪತ್ನಿಯರಲ್ಲಿ ಒಬ್ಬರಾದ ವಿಂಡಿ ಡೆಂಗ್ ನೀಡಿದ ಪಾರ್ಟಿಯಲ್ಲಿ ಭೇಟಿಯಾಗಿದ್ದರು. ಅಂದಿನಿಂದ ಅವರು ಎಲೆನಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಎಲೆನಾ ಒಬ್ಬ ನಿವೃತ್ತ ಜೀವಶಾಸ್ತ್ರಜ್ಞರಾಗಿದ್ದು, ಈ ಹಿಂದೆ ಮಾಸ್ಕೋ ತೈಲ ಬಿಲಿಯನೇರ್ ಅಲೆಕ್ಸಾಂಡರ್ ಅವರನ್ನು ಕೈ ಹಿಡಿದಿದ್ದಾರೆ.