ಇಂದು ಟೀಮ್ ಇಂಡಿಯಾ, ಪಾಕ್ ಮಧ್ಯೆ ಮೆಗಾ ಟೂರ್ನಿ ಟಿ20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ನ್ಯೂಯಾರ್ಕ್ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆಯಲಿರೋ ಈ ರೋಚ ಪಂದ್ಯಕ್ಕೆ ಇಡೀ ವಿಶ್ವದ ಕ್ರೀಡಾಭಿಮಾನಿಗಳು ಕಾಯುತ್ತಿದ್ದಾರೆ. ಹೇಗಾದ್ರೂ ಮಾಡಿ ಈ ಪ್ರತಿಷ್ಠೆ ಪಂದ್ಯ ಗೆಲ್ಲಲೇಬೇಕು ಎಂದು ಟೀಮ್ ಇಂಡಿಯಾ ಮತ್ತು ಪಾಕ್ ಎದುರು ನೋಡುತ್ತಿದೆ. ಈ ಮಧ್ಯೆ ಅಭಿಮಾನಿಗಳಿಗೆ ಹವಾಮಾನ ಇಲಾಖೆ ವರದಿ ಶಾಕ್ ಕೊಟ್ಟಿದೆ.
ಆಕ್ಯುವೆದರ್ ಪ್ರಕಾರ ಪಂದ್ಯದ ಸಂದರ್ಭದಲ್ಲೇ ನ್ಯೂಯಾರ್ಕ್ನಲ್ಲಿ ಭಾರೀ ಮಳೆಯಾಗೋ ಸಾಧ್ಯತೆ ಇದೆ. ಅಂದರೆ ಮಳೆಯಾಗುವ ಸಾಧ್ಯತೆಗಳು ಶೇಕಡ 40 ರಷ್ಟಿದೆ. ಹಾಗಾಗಿ ಕನಿಷ್ಠ 2 ಗಂಟೆಗಳ ಕಾಲ ಮಳೆ ಎಂದು ಸುರಿಯಲಿದೆ ಎಂದು ವರದಿಯಾಗಿದೆ.
ಅಮೆರಿಕಾ ಕಾಲಮಾನದ ಪ್ರಕಾರ ಬೆಳಗ್ಗೆ 10:30ಕ್ಕೆ ಶುರುವಾಗಲಿದೆ. ಅಮೆರಿಕದಲ್ಲಿ ಬೆಳಗ್ಗಿನಿಂದಲೇ ಜೋರು ಮಳೆಯಾಗೋ ಸಾಧ್ಯತೆ ಇದೆ. ಪಂದ್ಯ ಆರಂಭಕ್ಕೂ 2 ಗಂಟೆ ಮುಂಚಿತವಾಗಿ ಮಳೆಯ ಸಾಧ್ಯತೆ ಇದೆ. ಹವಾಮಾನ ಮುನ್ಸೂಚನೆ ಪ್ರಕಾರ ಪಂದ್ಯಕ್ಕೆ ಮಳೆ ಅಡ್ಡಿಯಾಗುವುದು ಖಚಿತವಾಗಿದೆ.