- ರೇವ್ ಪಾರ್ಟಿ ಪ್ರಕರಣದಲ್ಲಿ ಬಂಧನವಾಗಿದ್ದ ನಟಿ ಹೇಮಾ
- ಎನ್ಡಿಪಿಎಸ್ ವಿಶೇಷ ಕೋರ್ಟ್ ಜೂನ್ 12ರಂದು ಷರತ್ತುಬದ್ಧ ಜಾಮೀನು
ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿ ಸುಮಾರು 250 ಚಿತ್ರಗಳಲ್ಲಿ ನಟಿ ಹೇಮಾ ನಟಿಸಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಖಾಯಂ ಪೋಷಕ ನಟಿಯಾಗಿ ಹೇಮಾ ಕೆಲಸ ಮಾಡಿದ್ದಾರೆ. 2014ರಲ್ಲಿ ಪುನೀತ್ ರಾಜ್ಕುಮಾರ್ ನಟನೆಯ ಪವರ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ಆದ್ರೆ ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಯಲ್ಲಿ ಭಾಗಿಯಾಗಿ ಸುದ್ದಿಯಾಗಿದ್ರು. ಬೆಂಗಳೂರಿನಲ್ಲಿ ಇದ್ದುಕೊಂಡು ನಾನು ಹೈದರಾಬಾದ್ ಫಾರ್ಮ್ ಹೌಸ್ ನಲ್ಲಿ ಇದ್ದೇನೆ ಎಂದು ಎಲ್ಲರನ್ನು ಯಾಮಾರಿಸಿದ್ದ ನಟಿ ಹೇಮಾ ತನಿಖೆಯ ಬಳಿಕ ಸಿಕ್ಕಿಹಾಕೊಂಡ್ರು. ಆದಾದ ನಂತರ ಡ್ರಗ್ಸ್ ಪಡೆದಿರುವುದಾಗಿ ಪಾಸಿಟಿವ್ ಬಂದ ಹಿನ್ನೆಲೆ ನಟಿಗೆ 2 ಬಾರಿ ನೋಟೀಸ್ ನೀಡಿದರು ಹಾಜರಾಗಿರಲಿಲ್ಲ.
ಬೆಂಗಳೂರು ರೇವ್ ಪಾರ್ಟಿಯಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದ ನಟಿ ಹೇಮಾ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ರು. ಎನ್ಡಿಪಿಎಸ್ ವಿಶೇಷ ಕೋರ್ಟ್ ಜೂನ್ 12ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಇದೀಗ ನಟಿ ಹೇಮಾಗೆ ಷರತ್ತುಬದ್ಧ ಜಾಮೀನು ಸಿಕ್ಕಿದ್ದು ಜೈಲಿನಿಂದ ಹೊರಬಂದಿದ್ದಾರೆ. ಇವರನ್ನು ಕರೆದುಕೊಂಡು ಹೋಗಲು ಅವರ ಸಹೋದರರು ಬಂದಿದ್ದಾರೆ.