- ಅನಂತ್ ನನ್ನ ಜನ್ಮದಿನದಂದು ಪ್ರೇಮ ಪತ್ರ ಬರೆದಿದ್ದರು
- ಪ್ರೇಮಪತ್ರವನ್ನು ಪ್ರಿಂಟ್ ಮಾಡಿದ್ದ ಗೌನ್ನಲ್ಲಿ ಮಿಂಚಿದ ರಾಧಿಕಾ ಮರ್ಚೆಂಟ್
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ಅವರು ಯುರೋಪ್ನಲ್ಲಿ ಕ್ರೂಸ್ನಲ್ಲಿ ಅದ್ಧೂರಿಯಾಗಿ ಎರಡನೇ ವಿವಾಹ ಸಂಭ್ರಮಾಚರಣೆ ಮಾಡಿದರು. ನಾಲ್ಕು ದಿನಗಳ ಈ ಕಾರ್ಯಕ್ರಮದಲ್ಲಿ ಹೈಲೈಟ್ ಆಗಿದ್ದು, ರಾಧಿಕಾ ಅವರ ವಿಭಿನ್ನವಾದ ಉಡುಪುಗಳು. 22ನೇ ವಯಸ್ಸಿನಲ್ಲಿದ್ದಾಗ ಗೆಳೆಯ ಅನಂತ್ ಅಂಬಾನಿ ಅವರು ಆಕೆಗಾಗಿ ಬರೆದ ಪ್ರೇಮಪತ್ರವನ್ನು ಈ ಗೌನ್ನಲ್ಲಿ ಪ್ರಿಂಟ್ ಮಾಡಲಾಗಿದೆ. ಈ ಗೌನ್ ಧರಿಸಿ ರಾಧಿಕಾ ಮರ್ಚೆಂಟ್ ಮಿಂಚಿದ್ದಾರೆ.
ರಾಧಿಕಾ ಈ ಕುರಿತು ಮಾತನಾಡಿ, “ಅನಂತ್ ನನ್ನ ಜನ್ಮದಿನದಂದು ಪ್ರೇಮ ಪತ್ರ ಬರೆದಿದ್ದರು. ಈ ಪ್ರೇಮ ಪತ್ರವನ್ನು ನಾನು ನನ್ನ ಮುಂದಿನ ಪೀಳಿಗೆಗೆ ತೋರಿಸಲು ಬಯಸುವೆ, ನಮ್ಮ ಪ್ರೀತಿ ಹೀಗಿತ್ತು ಎಂಬುದನ್ನು ನಾನು ನನ್ನ ಮಕ್ಕಳಿಗೆ ಮೊಮ್ಮಕ್ಕಳಿಗೆ ತೋರಿಸಲು ಬಯಸುವೆʼʼ ಎಂದು ರಾಧಿಕಾ ಮರ್ಚೆಂಟ್ ಹೇಳಿದ್ದಾರೆ. ಪತ್ರದ ಪ್ರಿಂಟೆಡ್ ಉಡುಪಿನಲ್ಲಿ ಅಂದವಾಗಿ ಕಾಣುತ್ತಿದ್ದರು ರಾಧಿಕಾ.
ಇಟಲಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ವಿವಾಹ ಪೂರ್ವ ಆಚರಣೆಯಲ್ಲಿ ರಾಧಿಕಾ ಮರ್ಚಂಟ್ ಅವರ ಡ್ರೆಸ್ ಕೂಡ ಹೈಲೈಟ್ ಆಗಿತ್ತು. ಆರ್ಕೈವಲ್ ಡಿಯೊರ್ ಸ್ಕರ್ಟ್ ಧರಿಸಿದ್ದರು ರಾಧಿಕಾ. 1959ರ ಫ್ಯಾಷನ್ ಸ್ಲೀವ್ ಲೆಸ್ ಡ್ರೆಸ್ ಆಗಿದ್ದರೂ ಮಾಡರ್ನ್ ಆಗಿದೆ. ವಿಶಾಲವಾದ ಭುಜದ ಪಟ್ಟಿಗಳು, ಚೌಕಾಕಾರದ ಡಿಸೈನ್, ಜತೆಗೆ ಸ್ಕರ್ಟ್ ರೀತಿಯ ವಿನ್ಯಾಸ ಇನ್ನಷ್ಟು ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಸ್ಕರ್ಟ್ ಬೆಲೆ 3,20,714ರೂ. ಆಗಿದೆ.