- ಪವನ್ ಕಲ್ಯಾಣ್ ಗೆ ಅತ್ತಿಗೆಯಿಂದ ಸಿಕ್ತು ಸ್ಪೇಷಲ್ ಗಿಫ್ಟ್
- ಗಿಫ್ಟ್ ಕೊಟ್ಟ ವಿಡಿಯೋ ಹಂಚಿಕೊಂಡ ಮೆಗಾಸ್ಟಾರ್ ಚಿರಂಜೀವಿ
ಆಂಧ್ರ ಪ್ರದೇಶದ ನೂತನ ಉಪ ಮಂತ್ರಿಯಾಗಿರುವ ಪವನ್ ಕಲ್ಯಾಣ್ ಗೆ ಅತ್ತಿಗೆಯಿಂದ ಸಿಕ್ತು ವಿಶೇಷ ಗಿಫ್ಟ್. DCM ಆಗಿರುವ ಪವನ್ ಕಲ್ಯಾಣ್ ಗೆ ಚಿರಂಜೀವಿ ಪತ್ನಿ ಒಂದು ಉಡುಗೊರೆ ನೀಡಿದ್ದಾರೆ. ಇದನ್ನು ಮೆಗಾಸ್ಟಾರ್ ಚಿರಂಜೀವಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ .
ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಪವನ್ ಇತಿಹಾಸ ನಿರ್ಮಿಸಿದ್ದಾರೆ. ಈ ಗೆಲುವು ಅಭಿಮಾನಿಗಳಿಗೆ ಸಂತಸ ತಂದಿದೆ. ಇನ್ನು ಅಣ್ಣ ಚಿರಂಜೀವಿ ಅಂತೂ ಮಗುವಿನಂತೆ ಸಂಭ್ರಮಿಸಿದ್ದಾರೆ. ಪವನ್ ಬೆನ್ನ ಹಿಂದೆಯೇ ನಿಂತು ಅಣ್ಣ ಬೆಂಬಲ ನೀಡಿದ್ದು, ಪವನ್ ನ ರಾಜಕೀಯ ಗೆಲುವು ಕಂಡು ಚಿರಂಜೀವಿ ಹೆಮ್ಮೆ ಪಟ್ಟಿದ್ದಾರೆ.
ಇನ್ನು,ಚಿರಂಜೀವಿ ಪತ್ನಿ ಸುರೇಖಾ ಪವನ್ರನ್ನು ತನ್ನ ಮಗನಂತೆ ಕಾಣುತ್ತಾರೆ. ಅವರಿಗೆ ಪವನ್ ಮೇಲೆ ವಿಶೇಷ ಪ್ರೀತಿ. ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪವನ್ ಕಲ್ಯಾಣ್ ಪರವಾಗಿ ಪೀಠಾಪುರಂನಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು. ಚುನಾವಣೆ ಗೆದ್ದು ಮನೆಗೆ ಬಂದಿದ್ದ ಪವನ್ಗೆ ಆರತಿ ಎತ್ತಿ ಸಂಭ್ರಮಿಸಿದ್ದರು ಸುರೇಖಾ, ಇದೀಗ ವಿಶೇಷ ಉಡುಗೊರೆಯೊಂದನ್ನು ಸುರೇಖಾ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ.
ಅತ್ತಿಗೆ ಪವನ್ ಕಲ್ಯಾಣ್ಗೆ ಮೌಂಟ್ ಬ್ಲಾಂಕ್ ಪೆನ್ ಅನ್ನು ನೀಡಿದ್ದಾರೆ. ಈ ವಿಡಿಯೋವನ್ನು ಚಿರಂಜೀವಿ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ತೆಲುಗು ಜನರ ಆಕಾಂಕ್ಷೆಗಳನ್ನು ಈಡೇರಿಸುತ್ತೀಯ ಎಂಬ ಆಶಯ ಹಾಗೂ ಆಶೀರ್ವಾದ ಇದೆ’ ಎಂದಿದ್ದಾರೆ. ಈ ಗಿಫ್ಟ್ ಹಿಡಿದು ಅಣ್ಣ ಅತ್ತಿಗೆ ಹಾಗೂ ಪತ್ನಿ ಜೊತೆ ಪವನ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.