ಗುರುಗ್ರಾಮ್ನಲ್ಲಿ UPSC ಪ್ರಿಲಿಮ್ಸ್ ಪರೀಕ್ಷೆಯ ಆಕಾಂಕ್ಷಿಯೊಬ್ಬರು ಪರೀಕ್ಷೆಗೆ ತಡವಾಗಿ ಬಂದ ಹಿನ್ನೆಲೆ ತನ್ನ ಪರೀಕ್ಷಾ ಕೇಂದ್ರ ಪ್ರವೇಶವನ್ನು ನಿರಾಕರಿಸಲಾಗಿದೆ. ಇದಕ್ಕೆ ಆಕೆಯ ಪೋಷಕರ ಭಾವನಾತ್ಮಕ ಪ್ರತಿಕ್ರಿಯೆಯನ್ನು ತೋರಿಸಿದ್ದರೆ ಇದರ ವೀಡಿಯೊ ವೈರಲ್ ಆಗಿದ್ದು, ಜನರ ಗಮನ ಸೆಳೆದಿದೆ.
ಪರೀಕ್ಷೆಗೆ ತಡ ಬಂದಿದ್ದ ಕಾರಣ UPSC ಪ್ರಿಲಿಮ್ಸ್ ಪರೀಕ್ಷೆಯ ಆಕಾಂಕ್ಷಿಯನ್ನು ಆದರ್ಶ ವಿದ್ಯಾಲಯ ಪರೀಕ್ಷೆ ಬರಿಯಲು ಅನುಮತಿಸುವುದಿಲ್ಲ. ಇದನ್ನು ಕೇಳಿದ ಆಕೆಯ ತಾಯಿ ಪ್ರಜ್ಞಾಹೀನರಾಗಿ ಬೀಳುತ್ತಾರೆ. ತಂದೆ ಹತಾಶೆಯಿಂದ ರೋದಿಸುತ್ತಾರೆ. ಪರೀಕ್ಷೆಯು 9: 30 ಕ್ಕೆ ಪ್ರಾರಂಭವಾಗುತ್ತದೆ. ಅವರು ಸುಮಾರು 9 ಗಂಟೆಗೆ ವಿದ್ಯಾಲಯದ ಗೇಟ್ನಲ್ಲಿದ್ದರು ಆದರೆ ಎಸ್ಡಿ ಪ್ರಾಂಶುಪಾಲರು ಅವರನ್ನು ಒಳಗೆ ಪರೀಕ್ಷೆ ಬರಿಯಲು ಬಿಡುವುದಿಲ್ಲ. ಇದನ್ನು ನೋಡಿದ ತಾಯಿ ಪ್ರಜ್ಞೆ ತಪ್ಪುತ್ತಾರೆ. ತಂದೆ ೧ ವರ್ಷ ವೇಸ್ಟ್ ಆಗುತ್ತೆ ಎಂದು ನರಳುತ್ತಿರುವಾಗ ಮಗಳು ತಂದೆಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾಳೆ “ಅಪ್ಪಾ, ದಯವಿಟ್ಟು ನೀರು ಕುಡಿಯಿರಿ ಮತ್ತು ಶಾಂತವಾಗಿ. ಯಾಕೆ ಹೀಗೆ ವರ್ತಿಸುತಿದ್ದೀರಾ? ಮುಂದಿನ ವರ್ಷ ಪರೀಕ್ಷೆಗೆ ಹಾಜರಾಗಿ ಪಾಸ್ ಮಾಡುತ್ತೇನೆ ಎಂದು ಭರವಸೆಯ ಮಾತನಾಡಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.