- ರೇಣುಕಾಸ್ವಾಮಿ ಕುಟುಂಬಸ್ತರಿಗೆ ಸಾಂತ್ವಾನ ಹೇಳಿದ ಡಾ. ಜಿ ಪರಮೇಶ್ವರ್
- ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ತನಿಖೆ ನಡೆಸುತ್ತಿದೆ
- ಈ ವಿಷಯದಲ್ಲಿ ರಾಜಕೀಯ ನಡೆಯಬಾರದು
ನಟ ದರ್ಶನ್ ಗ್ಯಾಂಗ್ನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾ ಸ್ವಾಮಿ ಮನೆಗೆ ಇಂದು ಗೃಹ ಸಚಿವ ಡಾ.ಜಿ ಪರಮೇಶ್ವರ ಭೇಟಿ ನೀಡಿದ್ದು, ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಹತ್ಯೆ ಪ್ರಕರಣ ಕುರಿತು ಮತ್ತಷ್ಟು ಮಾಹಿತಿ ಪಡೆದು, ಸೂಕ್ತ ತನಿಖೆ ಮಾಡಿಸುವ ಭರವಸೆ ನೀಡಿದರು.
“ಕುಟುಂಬದವರಿಗೆ ಸಾಂತ್ವನ ಹೇಳಬೇಕು ಅಂತ ಬಂದಿದ್ದೇನೆ. ಇದು ಬಹಳ ನೋವು ಉಂಟು ಮಾಡಿದೆ. ಸರ್ಕಾರ ಯಾವುದೇ ಮುಲಾಜು ಇಲ್ಲದೇ ತನಿಖೆ ಮಾಡ್ತಿದೆ. ಈಗಾಗಲೇ ಸುಮಾರು 17 ಜನ ಆರೆಸ್ಟ್ ಆಗಿದ್ದಾರೆ. ರೇಣುಕಾ ಪತ್ನಿ ಗರ್ಭಿಣಿ ಆಗಿದ್ದಾರೆ. ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ಉದ್ಯೋಗ ಕೊಡಿಸಬೇಕು ಎಂಬ ಬೇಡಿಕೆ ಇದೆ. ಸಿಎಂ ಜೊತೆ ಚರ್ಚೆ ಮಾಡ್ತೀನಿ ಅಂತ ಹೇಳಿದ್ದೇನೆ. ಯಾವುದೇ ರೀತಿ ತಪ್ಪು ಆಗದ ಹಾಗೆ ತನಿಖೆ ಮಾಡಿ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ. ಯಾರೂ ರಾಜಕೀಯ ಮಾಡಬಾರದು. ನಮ್ಮ ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೆ ಚೆನ್ನಾಗಿ ಕೆಲಸ ಮಾಡಿದ್ದಾರೆ” ಎಂದರು.