ಟೀಮ್ ಇಂಡಿಯಾದ ಸೂಪರ್-8 ಅಭಿಯಾನಕ್ಕೆ ಕೌಂಟ್ಡೌನ್ ಶುರುವಾಗಿದೆ. ಇದರ ನಡುವೆ ಟೀಮ್ ಇಂಡಿಯಾಗೆ ಹೊಸ ಟೆನ್ಷನ್ ಶುರುವಾಗಿದೆ. ಇದರಿಂದ ಹೇಗಪ್ಪಾ ಪಾರಾಗೋದು ಅಂತ ದೊಡ್ಡ ಚಿಂತೆಯಾಗಿದೆ.
ಟಿ20 ವಿಶ್ವಕಪ್ ಸಂಗ್ರಾಮದಲ್ಲಿ ಟೀಮ್ ಇಂಡಿಯಾ ಆಟಗಾರರರು ಬಳಲಿದ್ದಾರಾ? ಅನ್ನೋ ಮಾತುಗಳು ಇದೀಗ ಕೇಳಿ ಬರ್ತಿದೆ. ಈಗಾಗ್ಲೇ ರೋಹಿತ್ ಶರ್ಮಾ ಗ್ರೂಪ್ ಸ್ಟೇಜ್ನಲ್ಲಿ ಒಂದು ಸೋಲನ್ನು ಕಾಣದೆ ಗ್ರ್ಯಾಂಡ್ ಆಗಿ ಸೂಪರ್-8ಗೆ ಎಂಟ್ರಿಕೊಟ್ಟಿದೆ. ಇದೇ ಹೊತ್ತಲ್ಲಿ ಭಾರತ ತಂಡದ ಆಟಗಾರರರು ಟ್ರಾವೆಲ್ನಿಂದ ಬಳಲಿದ್ದಾರಾ ಅನ್ನೋ ಬಿಸಿಸಿಐ ಚರ್ಚೆ ನಡೆಯುತ್ತಿದೆ.
ಆರು ದಿನ 3 ಮ್ಯಾಚ್.. 858 ಕಿ.ಮೀ ಜರ್ನಿ..!
ಟೀಮ್ ಇಂಡಿಯಾದ ಸೂಪರ್-8 ಅಭಿಮಾನ ನಾಳೆಯಿಂದ ಆರಂಭಗೊಳ್ಳಲಿದೆ
ಆರು ದಿನದಲ್ಲಿ ಮೂರು ಪಂದ್ಯಗಳನ್ನ ಆಡಲಿದ್ದು
ಈ ಅವಧಿಯಲ್ಲಿ ಒಟ್ಟು 858 ಕಿಲೋ ಮೀಟರ್ ಪ್ರಯಾಣ ಮಾಡಲಿದೆ.
ರೆಸ್ಟ್ ಅನ್ನೋದೆ ಕಮ್ಮಿ. ಫ್ಲೈಟ್ನಲ್ಲೆ ಹೆಚ್ಚು ಸಮಯ ಕಳೆಯೋದ್ರಿಂದ ಪ್ರಾಕ್ಟೀಸ್ ಹಾಗೂ ಸಿದ್ಧತೆಗೆ ಹೆಚ್ಚು ಸಮಯ ಸಿಗೋದಿಲ್ಲ.
ಇದರಿಂದ ರಿಸಲ್ಟ್ ಮೇಲೆ ಪರಿಣಾಮ ಬೀರುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.
ಫ್ಲೋರಿಡಾ TO ಬಾರ್ಬಡೋಸ್.. 3213 ಕಿ.ಮೀ ಟ್ರಾವೆಲ್..
ಈಗಾಗ್ಲೇ ಟೀಮ್ ಇಂಡಿಯಾ ಫ್ಲೋರಿಡಾದಿಂದ ಬಾರ್ಬಡೋಸ್ಗೆ ಟ್ರಾವೆಲ್ ಮಾಡಿದೆ.
ಭಾರತ ತಂಡ ಇಂದು (ಜೂನ್ 20) ಅಪ್ಘಾನಿಸ್ತಾನ ತಂಡವನ್ನ ಎದುರಿಸಲಿದೆ.
ಬಾರ್ಬಡೋಸ್ TO ಆಂಟಿಗುವಾ.. 495 ಕಿ.ಮೀ ಪ್ರಯಾ
ಗುರುವಾರ ಅಪ್ಘಾನಿಸ್ತಾನ ವಿರುದ್ಧ ಆಡುವ ಟೀಮ್ ಇಂಡಿಯಾ
ಒಂದು ದಿನ ಗ್ಯಾಪ್ ಬಳಿಕ ಆಂಟಿಗುವಾಗೆ ಪ್ರಯಾಣ ಬೆಳೆಸಲಿದೆ
ಬಾರ್ಬಡೋಸ್ನಿಂದ ಆಂಟಿಗುವಾ ಬರೋಬ್ಬರಿ 495 ಕಿಲೋ ಮೀಟರ್ ಕ್ರಮಿಸಲಿದೆ
ಜೂನ್ 22 ರಂದು ಬಾಂಗ್ಲಾದೇಶ ಎದುರು ಸೆಣಸಾಡಲಿದೆ
ಆಂಟಿಗುವಾ TO ಸೇಂಟ್ ಲೂಸಿಯಾ..363 ಕಿ.ಮೀ ಜರ್ನಿ..
ಆಂಟಿಗುವಾದಲ್ಲಿ ಬಾಂಗ್ಲಾ ದೇಶವನ್ನ ಟೀಮ್ ಇಂಡಿಯಾ ಎದುರೀಸಲಿದೆ
ಅಲ್ಲಿಂದ ನೇರವಾಗಿ ಸೇಂಟ್ ಲೂಸಿಯಾಗೆ ಫ್ಲೈಟ್ ಏರಲಿದೆ
ಇಲ್ಲಿ ಒಂದು ದಿನ ವಿಶ್ರಾಂತಿ ಪಡೆದು ಮರುದಿನ ಬಲಿಷ್ಠ ಆಸ್ಟ್ರೇಲಿಯಾ ಎದುರು ತೊಡೆ ತಟ್ಟಲಿದೆ
ಬಿಡುವಿಲ್ಲದ ಪ್ರಯಾಣದ ಬಗ್ಗೆ ಕ್ಯಾಪ್ಟನ್ ರೋಹಿತ್ ಮಾತನಾಡಿದ್ದಾರೆ. ಇದು ನಿರಂತರ ಕ್ರಿಕೆಟ್ ಅನ್ನಿಸಿದ್ರೂ ಎಲ್ಲವನ್ನ ಎದುರಿಸೋಕೆ ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಟೀಮ್ ಇಂಡಿಯಾಗೆ ಮುಂದಿನ ಒಂದು ವಾರದಲ್ಲಿ ಮ್ಯಾರಥಾನ್ ಟ್ರಾವೆಲ್ ಇದೆ. ಸಿದ್ಧತೆ ಹೆಚ್ಚು ಸಮಯ ಇಲ್ಲ. ಸಣ್ಣ ಬಿಡುವು ಪಡೆದು ಎದುರಾಳಿ ಸಂಹಾರಕ್ಕೆ ಸಜ್ಜಾಗಬೇಕಿದೆ. ಈ ಮ್ಯಾರಥಾನ್ ಟ್ರಾವೆಲ್ ಸವಾಲನ್ನು ಟೀಮ್ ಇಂಡಿಯಾ ಆಟಗಾರರು ಹೇಗೆ ನಿಭಾಯಿಸ್ತಾರೆ ಅನ್ನೊದನ್ನು ಕಾದುನೋಡೋಣ.