- ಸೌದಿ ಅರೇಬಿಯಾದ ಮೆಕ್ಕಾದಲ್ಲಿ ತಾಪಮಾನ ಏರಿಕೆ
- ಈ ವರ್ಷದ ಹಜ್ನಲ್ಲಿ1,000 ಕ್ಕೂ ಹೆಚ್ಚು ಜನರ ಸಾವು
ಸೌದಿ ಅರೇಬಿಯಾದ ಧರ್ಮ ಕ್ಷೇತ್ರ ಮೆಕ್ಕಾದಲ್ಲಿ ತಾಪಮಾನ ಏರಿಕೆಯಾಗಿದ್ದು ಇದರ ಪರಿಣಾಮ ಹಜ್ ಯಾತ್ರೆಗೆ ತೆರಳಿ ಸಾವನ್ನಪಿದವರ ಸಂಖ್ಯೆ 1,000 ಗಡಿ ದಾಟಿದೆ. ಏಷ್ಯಾದ ಕೆಲವು ಭಾಗಗಳಲ್ಲಿ ಬಿಸಿಲಿನ ತಾಪ ಮುಂದುವರಿದಿರುವುದರಿಂದ, ಸೌದಿ ಅರೇಬಿಯಾದಲ್ಲಿ ಈ ವರ್ಷದ ಹಜ್ನಲ್ಲಿ1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಎಎಫ್ ಪಿ ವರದಿ ಮಾಡಿದೆ.
ಈ ನಡುವೆ ಮೃತಪಟ್ಟ ಭಾರತೀಯರ ಸಂಖ್ಯೆ 90ಕ್ಕೆ ಏರಿದೆ, ಮೆಕ್ಕಾದಲ್ಲಿ 49 ರಿಂದ 52 ಡಿಗ್ರಿ ತಾಪಮಾನ ಏರಿಕೆ ಕಂಡಿದೆ. ಮೃತರ ಪೈಕಿ ನೋಂದಾಯಿಸದ ಯಾತ್ರಿಗಳೇ ಹೆಚ್ಚಿದ್ದರೆ. ಕಳೆದ ವರ್ಷ ಇಲ್ಲಿ ವಿವಿಧ ದೇಶಗಳಲ್ಲಿ ಕನಿಷ್ಠ 240 ಯಾತ್ರಾರ್ಥಿಗಳು ಸಾವನ್ನಪ್ಪಿದ್ದರು. ಈ ಪೈಕಿ ಹೆಚ್ಚಿನವರು ಇಂಡೋನೇಷ್ಯಾದವರು. ಈ ವರ್ಷ ಸುಮಾರು 18,00,000 ಯಾತ್ರಾರ್ಥಿಗಳು ಹಜ್ ಯಾತ್ರೆಯಲ್ಲಿ ಭಾಗವಹಿಸಿದ್ದು, ಆ ಪೈಕಿ 16,00,000 ವಿದೇಸಿಗರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ