ಮ್ಯಾಕ್ಸ್ ಮೂಲಕ ಮ್ಯಾಕ್ಸಿಮಮ್ ಎಂಟರ್‌ಟೈನ್ಮೆಂಟ್ ಕೊಟ್ಟ ಬಾದ್ ಷಾ ಕಿಚ್ಚ ಸುದೀಪ್, ಇದೀಗ ಬಿಲ್ಲ ರಂಗ ಬಾಷನಾಗಿ ಒಂದಲ್ಲ ಎರಡಲ್ಲ ತ್ರೀ ಶೇಡ್ಸ್ ನಲ್ಲಿ ಕಿಕ್ ಕೊಡೋಕೆ ಸಜ್ಜಾಗ್ತಿದ್ದಾರೆ. ಇಷ್ಟಕ್ಕೂ ಅವ್ರ ವರ್ಕೌಟ್ ನೋಡಿದ್ರೆ ನೀವು ಬೆರಗಾಗೋದು ಗ್ಯಾರಂಟಿ.
ಬಿಲ್ಲ ರಂಗ ಬಾಷ.. ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ನೆಕ್ಸ್ಟ್ ವೆಂಚರ್. ಈ ಹಿಂದೆ ವಿಕ್ರಾಂತ್ ರೋಣ ಚಿತ್ರ ಮಾಡಿದ್ದ ಅನೂಪ್ ಭಂಡಾರಿ ಆ್ಯಕ್ಷನ್ ಕಟ್‌ನಲ್ಲಿ ತಯಾರಾಗ್ತಿರೋ ಸಿನಿಮಾ. ಸುದೀಪ್- ಅನೂಪ್ ಮಧ್ಯೆ ಒಂದೊಳ್ಳೆ ಬಾಂಡಿಂಗ್ ಏರ್ಪಟ್ಟಿದ್ದು, ಈ ಕಥೆಗಾಗಿ ವಿಕ್ರಾಂತ್ ರೋಣ ಡೈರೆಕ್ಟರ್ ಬೇರಾವ ಸಿನಿಮಾಗೂ ಕಮಿಟ್ ಆಗದೆ ಮೂರು ವರ್ಷ ಕಾದಿದ್ದಾರೆ.
ಮ್ಯಾಕ್ಸ್ ಹಿಟ್ ಆದ ಬಳಿಕ ಸಹಜವಾಗಿಯೇ ಮುಂದಿನ ಸಿನಿಮಾದ ಮೇಲೆ ಅತೀವ ನಿರೀಕ್ಷೆ ಇದ್ದೇ ಇರಲಿದೆ. ಸೋ.. ಕಳೆದ ವರ್ಷಾಂತ್ಯದಲ್ಲಿ ಒಂದೊಳ್ಳೆ ಕಥೆ, ಅದ್ಭುತ ಪರ್ಫಾಮೆನ್ಸ್ ಮೂಲಕ ಬ್ಲಾಕ್ ಬಸ್ಟರ್ ನೀಡಿದ್ರು ಅಭಿನಯ ಚಕ್ರವರ್ತಿ. ಇದೀಗ ಮ್ಯಾಕ್ಸ್ ನಂತ್ರ ಬಿಲ್ಲ ರಂಗ ಬಾಷ ಟೈಟಲ್ ನಿಂದಲೇ ಸಖತ್ ಸೌಂಡ್ ಮಾಡ್ತಿದೆ.
ಕ್ರಿ.ಶ.2209ರ ಕಾಲಘಟ್ಟದ ಕಥಾನಕ ಬಿಲ್ಲ ರಂಗ ಬಾಷ ಚಿತ್ರದಲ್ಲಿರಲಿದ್ದು, ವೈಜ್ಞಾನಿಕತೆಯನ್ನ ಬೆರೆಸಿದ ಫ್ಯಾಂಟಸಿ ಎಂಟರ್‌ಟೈನರ್ ಜಾನರ್‌ನಿಂದ ಕೂಡಿರಲಿದೆ. ಚೈತನ್ಯ ರೆಡ್ಡಿ ಹಾಗೂ ನಿರಂಜನ ರೆಡ್ಡಿ ನಿರ್ಮಾಣದ ಈ ಸಿನಿಮಾ ಸುದೀಪ್ ಫಿಲ್ಮ್ ಕರಿಯರ್‌ನಲ್ಲೇ ಬಿಗ್ಗೆಸ್ಟ್ ಸಿನಿಮಾ ಆಗಲಿದ್ದು, ತ್ರಿಬಲ್ ರೋಲ್‌ನಲ್ಲಿ ಕಿಕ್ ಕೊಡಲಿದ್ದಾರೆ ಕಿಚ್ಚ. ಅದಕ್ಕಾಗಿ ಹೈದ್ರಾಬಾದ್‌ನಲ್ಲಿ ದೇಹವನ್ನ ಹುರಿಗೊಳಿಸುತ್ತಿದ್ದು, ರಿವೀಲ್ ಆಗಿರೋ ಸುದೀಪ್ ಫೋಟೋಸ್ ಹುಬ್ಬೇರಿಸುವಂತಿವೆ.
ಕೆಜಿಎಫ್, ವಿಕ್ರಾಂತ್ ರೋಣ ಸಿನಿಮಾಗಳ ಖ್ಯಾತಿಯ ಆರ್ಟ್ ಡೈರೆಕ್ಟರ್ ಶಿವಕುಮಾರ್ ಕಲಾ ಕುಂಚದಲ್ಲಿ ಸೆಟ್ ವರ್ಕ್ ನಡೆಯುತ್ತಿದೆ. ಒಂದಲ್ಲ ಎರಡೆರಡು ಕಡೆ ಬಿಆರ್‌ಬಿ ಚಿತ್ರಕ್ಕಾಗಿ ಬೃಹತ್ ಸೆಟ್‌ಗಳನ್ನ ನಿರ್ಮಿಸಲಾಗ್ತಿದೆ. ಕಂಠೀರವ ಸ್ಟುಡಿಯೋ ಹಾಗೂ ನೈಸ್ ರೋಡ್‌ನಲ್ಲಿನ ಸೆಟ್‌ಗಳಲ್ಲೇ ಬಿಆರ್‌ಬಿ ಪ್ರಮುಖ ದೃಶ್ಯಗಳು ಸೆರೆಯಾಗಲಿವೆಯಂತೆ. ಅಂದಹಾಗೆ ವಿಕ್ರಾಂತ್ ರೋಣ, ಕಬ್ಜ ಫೇಮ್ ವಿಲಿಯಂ ಡೇವಿಡ್ ಈ ಚಿತ್ರದ ಸಿನಿಮಾಟೋಗ್ರಾಫರ್.
ಇದೇ ಏಪ್ರಿಲ್ 16ರಿಂದ ಬಿಲ್ಲ ರಂಗ ಬಾಷ ಚಿತ್ರ ಸೆಟ್ಟೇರಲಿದ್ದು, ಪರಭಾಷಾ ಕಲಾವಿದರು ಕೂಡ ತಾರಾಗಣದಲ್ಲಿ ಇರಲಿದ್ದಾರೆ ಎನ್ನಲಾಗ್ತಿದೆ. ಈಗಾಗ್ಲೇ ಒಂದೊಳ್ಳೆ ಫೋಟೋಶೂಟ್ ಮಾಡಿಸಿ, ಲುಕ್ಸ್ ಕೂಡ ರಿವೀಲ್ ಮಾಡಿದ್ರು ಡೈರೆಕ್ಟರ್ ಅನೂಪ್ ಭಂಡಾರಿ. ಪೈಲ್ವಾನ್ ಸಿನಿಮಾದ ವೇಳೆ ಸಿಜಿ, ಗ್ರಾಫಿಕ್ಸ್‌ನಿಂದ ಸುದೀಪ್ ತೋಳುಗಳನ್ನ ಹಿಗ್ಗಿಸಲಾಗಿದೆ ಅಂದವ್ರಿಗೆ, ವಿಕ್ರಾಂತ್ ರೋಣ ಹಾಗೂ ಮ್ಯಾಕ್ಸ್‌ನಲ್ಲಿ ಉತ್ತರ ನೀಡಿದ್ರು. ಇದೀಗ ಬಿಲ್ಲ ರಂಗ ಬಾಷಗಾಗಿ ಸ್ವತಃ ಕಿಚ್ಚನೇ ಕೊಂಚ ಜಾಸ್ತಿ ವರ್ಕೌಟ್ ಮಾಡಲು ಜಿಮ್‌ಗಿಳಿದಿದ್ದಾರೆ. ಹಗಲಿರುಳು, ಸ್ಟ್ರಿಕ್ಟ್ ಡಯೆಟ್‌ನೊಂದಿಗೆ ದೇಹವನ್ನು ಹುರಿಗೊಳಿಸಿ, ಮಸಲ್ ಮ್ಯಾನ್ ಆಗ್ತಿದ್ದಾರೆ.