- ಖ್ಯಾತ ನಟ ನಾಗಾರ್ಜುನ ಅವರ ಸೆಲ್ಪಿ ಕೇಳಲು ಬಂದ ಅಭಿಮಾನಿ
- ಸೆಲ್ಪಿ ಕೇಳಲು ಬಂದ ಅಭಿಮಾನಿಯನ್ನು ತಳ್ಳಿದ ಬಾಡಿಗಾರ್ಡ್
- ಆ ವ್ಯಕ್ತಿಗೆ ಕ್ಷಮೆಯಾಚಿದ ನಟ ನಾಗಾರ್ಜುನ
ಸೆಲೆಬ್ರೆಟಿಗಳು ಕಂಡರೆ ಅಭಿಮಾನಿಗಳಿಗೆ ಅವರೊಂದಿಗೆ ಮಾತನಾಡಬೇಕು ಒಂದು ಫೋಟೋ ತೆಗೆದುಕೋಳ್ಳಬೇಕು ಎಂಬ ಆಸೆ ಇರುತ್ತದೆ. ಎಲ್ಲಾದರೂ ಸಾರ್ವಜನಿಕ ಸ್ಥಳಗಳಲ್ಲಿ ಸೆಲೆಬ್ರೆಟಿಗಳು ಕಾಣಿಸಿಕೊಂಡರೆ ಅವರ ಸುತ್ತಲೂ ಮುಟ್ಟಿಬಿಡುತ್ತಾರೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳು ಎಲ್ಲಿ ಹೋದರು ಅವರ ಬಾಡಿಗಾರ್ಡ್ಗಳು ಅವರ ಜೊತೆಯಲ್ಲೇ ಇರುತ್ತಾರೆ.
ತೆಲುಗಿನ ಖ್ಯಾತ ನಟ ನಾಗಾರ್ಜುನ ಅವರ ಬಾಡಿಗಾರ್ಡ್ ಜತೆಗೆ ವಿಮಾನ ನಿಲ್ದಾಣದಿಂದ ಹೊರಬರತ್ತಿದ್ದ ವೇಳೆ ವಿಶೇಷ ಚೇತನ ಅಭಿಮಾನಿ ನಾಗಾರ್ಜುನ ಅವರ ಜತೆ ಸೆಲ್ಪಿ ಕೇಳಲು ಬಂದಾಗ ಅವರ ಬಾಡಿಗಾರ್ಡ್ ಆತನನ್ನು ದೂರಕ್ಕೆ ತಳ್ಳಿದ್ದಾನೆ. ಆತ ಬೀಳುತ್ತಿದ್ದಂತೆ ಪಕ್ಕದಲ್ಲೇ ಇದ್ದ ಇತರರು ಹಿಡಿದುಕೊಂಡಿದ್ದಾರೆ. ಈ ಘಟನೆಯ ಕುರಿತು ನಾಗಾರ್ಜುನ ಗಮನಿಸಿರಲಿಲ್ಲ.
ಈ ವಿಡೀಯೊ ವೈರಲ್ ಆಗುತ್ತಿದ್ದಂತೆ ನಟ ನಾಗಾರ್ಜುನ ಕ್ಷಮೆ ಕೇಳಿದ್ದಾರೆ. ” ಇದು ನನ್ನ ಗಮನಕ್ಕೆ ಬಂದಿದೆ. ಈ ರೀತಿ ಆಗಬಾರದಿತ್ತು. ಆ ವ್ಯಕ್ತಿಗೆ ಕ್ಷಮೆಯಾಚಿಸುತ್ತೇನೆ. ಮುಂದೆ ಹೀಗಾಗದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆದಾಂತೆ ನಟ ನಾಗಾರ್ಜುನಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.