- ಅಬ್ಬೆ ಫಾಲ್ಸ್ನಲ್ಲಿ ಫೋಟೋಗೆ ಫೋಸ್ ಕೊಡಲು ಹೋಗಿ ಕೊಚ್ಚಿ ಹೋದ ಯುವಕ
- ಬಳ್ಳಾರಿ ಮೂಲದ ಸಾಫ್ಟ್ವೇರ್ ಉದ್ಯೋಗಿ ವಿನೋದ್ ಮೃತ ದುರ್ದೈವಿ
ನೆನ್ನೆ ಮಧ್ಯಾಹ್ನ ಬೆಂಗಳೂರಿನಿಂದ ಯಡೂರು ಸಮೀಪದ ಅಬ್ಬೆ ಜಲಪಾತಕ್ಕೆ ಬೆಂಗಳೂರು ಮೂಲದ 12ಮಂದಿ ಯುವಕರು ಜಲಪಾತ ನೋಡಲು ಹೋಗಿದ್ದರು. ಅದರಲ್ಲಿ ಬಳ್ಳಾರಿ ಮೂಲದ ಸಾಫ್ಟ್ವೇರ್ ಉದ್ಯೋಗಿ ವಿನೋದ್ ಪೋಟೋಗೆ ಪೋಸ್ ಕೊಡಲು ಹೋಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಪ್ರವಾಸಿಗನೊಬ್ಬ ಕಾಲು ಜಾರಿ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಹುಡುಕಾಟ ಆರಂಭಿಸಿದ್ದು, ನಿರಂತರ 18 ಗಂಟೆಗಳ ಬಳಿಕ ವಿನೋದ್ ಮೃತದೇಹ ಪತ್ತೆ ಹಚ್ಚಲಾಗಿದೆ. ವಿನೋದ್ ಕೊಚ್ಚಿ ಹೋದ ಮೇಲೆ ಬಹಳ ದೂರ ಹೋಗಿದ್ದು, ರಕ್ಷಣಾ ಸಿಬ್ಬಂದಿ ರಸ್ತೆ ಚಿಕ್ಕದಾದ ಕಾರಣಕ್ಕಾಗಿ ಕಂಬಕ್ಕೆ ಮೃತದೇಹವನ್ನು ಕಟ್ಟಿ ತೆಗೆದುಕೊಂಡು ಬಂದಿದ್ದಾರೆ. ಬೆಂಗಳೂರಿನಿಂದ ಅಬ್ಬಿ ಫಾಲ್ಸ್ ಪ್ರವಾಸಕ್ಕೆ ಬಂದಿದ್ದ ಬಳ್ಳಾರಿ ಮೂಲದ ವಿನೋದ್ ಸಾವನ್ನಪ್ಪಿದ್ದಾರೆ.