- ಜಹೀರ್ ಇಕ್ಬಾಲ್ ಜೊತೆ ಹಸೆಮಣೆ ಏರಿದ್ದ ನಟಿ ಸೋನಾಕ್ಷಿ ಸಿನ್ಹಾ
- ಮದುವೆ ನಂತರ ಕೆಂಪು ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡ ಸೋನಾಕ್ಷಿ ಸಿನ್ಹಾ
- ಸೋನಾಕ್ಷಿಗೆ BMW i7 ಕಾರು ಉಡುಗೊರೆಯಾಗಿ ನೀಡಿದ್ದ ಜಹೀರ್ ಇಕ್ಬಾಲ್
ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ತನ್ನ ಬಾಯ್ ಫ್ರೆಂಡ್ ಜಹೀರ್ ಇಕ್ಬಾಲ್ ಜೊತೆ (ಜೂನ್ 23) ಹಸೆಮಣೆ ಏರಿದ್ದಾರೆ. ಈ ಮದುವೆ ಸ್ಪೆಷಲ್ ಮ್ಯಾರೇಜ್ ಆಕ್ಟ್ ಅಡಿಯಲ್ಲಿ ನಡೆಯಲಿದೆ. ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ಇಬ್ಬರೂ ರಿಜಿಸ್ಟರ್ ಮ್ಯಾರೆಜ್ ಅಗಿದ್ದಾರೆ. ಇವರ ವಿವಾಹದಲ್ಲಿ ಯಾವುದೇ ಧರ್ಮದ ಶಾಸ್ತ್ರಗಳ ಆಚರಣೆ ಮಾಡಿಲ್ಲ.
ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್ ಇಕ್ಬಾಲ್ ಮದುವೆಯಾದ ನಂತರ ಮೊದಲ ಬಾರಿಗೆ ಫೋಟೋಸ್ಗೆ ಫೋಸ್ ನೀಡಿದ್ರು. ಸೋನಾಕ್ಷಿ ಕೆಂಪು ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡರು. ಹಣೆಯಲ್ಲಿ ಸಿಂಧೂರವಿಟ್ಟು, ಕತ್ತಿಗೆ ಚಿನ್ನದ ನೆಕ್ಲೇಸ್, ಕೆಂಪು ಬಳೆಗಳನ್ನು ಧರಿಸಿ ಸೋನಾಕ್ಷಿ ಮಿಂಚಿದ್ರು. ಮೂಲಗಳ ಪ್ರಕಾರ ಜಹೀರ್ ಇಕ್ಬಾಲ್ ಪತ್ನಿ ಸೋನಾಕ್ಷಿಗೆ BMW i7 ಕಾರನ್ನು ಉಡುಗೊರೆಯಾಗಿ ನೀಡಿದ್ದು, 2 ಕೋಟಿ ರೂ.ಗಿಂತ ಅಧಿಕ ಮೌಲ್ಯದಾಗಿದೆ. ಪತಿಯ ಗಿಫ್ಟ್ಗೆ ನಟಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.