- ತುಂಗಾ ನದಿ ಸ್ವಚ್ಛಗೊಳಿಸುವಂತೆ ನಟ ಅನಿರುದ್ಧ ಸಿಎಂಗೆ ಮನವಿ
- ನೀರಾವರಿ ನಿಗಮದ ಎಂಡಿ ರಾಜೇಶ್ಗೆ ಗಮನ ಹರಿಸುವಂತೆ ಸಿಎಂ ಸೂಚನೆ
ಬೆಂಗಳೂರು: ತುಂಗಾ ನದಿಯನ್ನು ಸ್ವಚ್ಛಗೊಳಿಸುವಂತೆ ನಟ ಅನಿರುದ್ಧ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಮಾಡಿದರು.
ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಟ ಅನಿರುದ್ಧ, ತುಂಗಾ ನದಿ ನೀರು ಸ್ವಚ್ಛತೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು.
ಈ ವೇಳೆ ಮುಖ್ಯಮಂತ್ರಿಗಳು ನೀರಾವರಿ ನಿಗಮದ ಎಂಡಿ ರಾಜೇಶ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕೂಡಲೇ ತುಂಗಾ ನದಿ ಸ್ವಚ್ಚತೆಗೆ ಗಮನ ಹರಿಸುವಂತೆ ಸೂಚಿಸಿದರು. ಇತ್ತೀಚೇಗೆ ಅನಿರುದ್ಧ ತುಂಗಾ ನದಿಗೆ ಭೇಟಿ ನೀಡಿ, ಕಲುಷಿತಗೊಂಡಿದ್ದ ನದಿಯನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದರು.