- ಬೆಂಗಳೂರು ರೈಲ್ವೇ ಸಿಬ್ಬಂದಿಯಿಂದಲೇ ಗಾಂಜಾ ದಂಧೆ
- 32.88 ಕೆಜಿಯ ಗಾಂಜಾ ವಶ
ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ರೈಲ್ವೇ ಸಿಬ್ಬಂದಿಯಿಂದಲೇ ಗಾಂಜಾ ದಂಧೆ ನಡೆದಿದೆ. ರಾಜಧಾನಿ ಅಗರ್ತಲದಿಂದ SMVT ಎಕ್ಸ್ಪ್ರೆಸ್ ರೈಲಿನಲ್ಲಿ ದಿಂಬು ಹಾಗೂ ಬೆಡ್ ಶೀಟ್ಗಳಲ್ಲಿ ಗಾಂಜಾ ಇಟ್ಟು ಸಾಗಿಸುತ್ತಿದ್ದರು. ಈ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ಲಭ್ಯವಿದ್ದು, ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಆರೋಪಿಗಳನ್ನು ಬಂಧಿಸಲಾಗಿದೆ.
ತ್ರಿಪುರಾ ಮೂಲದ ದೀಪನ್ ದಾಸ್, ಸುಮನ್, ಬೆಂಗಳೂರು ಮೂಲದ ಬಿಸ್ವಜಿತ್ ಪರಾರಿಯಾಗಿದ್ದಾರೆ. ಸಿಕ್ಕಿಬಿದ್ದ ಆರೋಪಿಗಳು ಕಾಂಟ್ರ್ಯಾಕ್ಟ್ ಆಧಾರದ ಮೇಲೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ರೈಲಿನಲ್ಲಿ ದಿಂಬು, ಬೆಡ್ಶೀಟ್ಗಾಗಿ ಬೇರೆ ಕಂಪಾರ್ಟ್ಮೆಂಟ್ ಇರುತ್ತದೆ. ಆದರೆ ಆರೋಪಿಗಳು ಈ ಕಂಪಾರ್ಟ್ಮೆಂಟ್ನಲ್ಲಿ ಗಾಂಜಾ ಇಡುತ್ತಿದ್ದ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದು ಗೊತ್ತಾಗುತ್ತಿದ್ದಂತೆ ಮತ್ತಿಬ್ಬರು ಆರೋಪಿಗಳು ಅಲ್ಲಿಂದ ಓಡಿ ಹೋಗಿದ್ದಾರೆ.
ಸದ್ಯ ಆರೋಪಿಗಳಿಂದ 32.88 ಕೆಜಿಯ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಪರಾರಿಯಾದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಈ ಸಂಬಂಧ ನಗರದ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರೈಲ್ವೆ ಪೊಲೀಸರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.