- ಮುಂಬೈನ ಕಾಲೇಜು ಆವರಣದಲ್ಲಿ ಹಿಜಾಬ್ ನಿಷೇಧ
- ವಿದ್ಯಾರ್ಥಿಗಳು ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್
ಮುಂಬೈನ ಕಾಲೇಜು ಆವರಣದಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಮುಂಬೈ ಕಾಲೇಜಿನ ಒಂಬತ್ತು ಮುಸ್ಲಿಂ ವಿದ್ಯಾರ್ಥಿಗಳು ಸಲ್ಲಿಸಿದ ಮನವಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.
ಮುಂಬೈನ ಚೆಂಬೂರ್ ಟ್ರಾಂಬೆ ಎಜುಕೇಷನ್ ಸೊಸೈಟಿಯ ಎನ್ಜಿ ಆಚಾರ್ಯ ಮತ್ತು ಚೆಂಬೂರಿನ ಡಿಕೆ ಮರಾಠೆ ಕಾಲೇಜು ಹಿಜಾಬ್ ನಿಷೇಧಿಸಲಾಗಿತ್ತು. ವಿಜ್ಞಾನ ಪದವಿ ಕೋರ್ಸ್ನ ವಿದ್ಯಾರ್ಥಿನಿಯರು ಯೂನಿಫಾರ್ಮ್ ಬದಲು ಯಾವುದೇ ಬೇರೆ ರೀತಿಯ ಡ್ರೆಸ್ ಧರಿಸುವಂತಿಲ್ಲ ಎಂದು ಆದೇಶಿಸಲಾಗಿತ್ತು. ಕಾಲೇಜು ಕ್ಯಾಂಪಸ್ನೊಳಗೆ ಹಿಜಾಬ್ ಅಷ್ಟೇ ಅಲ್ಲ ಶಾಲು, ಟೋಪಿ, ನಕಾಬ್, ಬುರ್ಖಾ ಸೇರಿದಂತೆ ಎಲ್ಲಾ ಬಗೆಯ ಧಾರ್ಮಿಕ ಉಡುಪು ನಿಷೇಧಿಸಲಾಗಿತ್ತು. ಬದಲಾಗಿ ಸಮವಸ್ತ್ರ ಮಾತ್ರ ಧರಿಸಿ ಬರುವಂತೆ ಆದೇಶಿಸಲಾಗಿತ್ತು. ಹಿಜಾಬ್ ನಿಷೇಧ ವಿರೋಧಿಸಿ ಇದೇ ಕಾಲೇಜಿನ 9 ಮಂದಿ ವಿದ್ಯಾರ್ಥಿನಿಯರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೇ ಜೂನ್ 26 ರಂದು ವಾದ ಪ್ರತಿವಾದ ಆಲಿಸಿದ ಬಾಂಬೆ ಹೈಕೋರ್ಟ್ ನ್ಯಾಯಪೀಠ ಹಿಜಾಬ್ಗೆ ನಿಷೆಧ ಹೇರಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ಧಾರವನ್ನು ಎತ್ತಿ ಹಿಡಿದಿದೆ. ನ್ಯಾಯಮೂರ್ತಿಗಳಾದ ಎಎಸ್ ಚಂದೂರ್ಕರ್ ಮತ್ತು ರಾಜೇಶ್ ಪಾಟೀಲ್ ಅವರ ಪೀಠವು ಜೂನ್ 26 ರಂದು ತೀರ್ಪು ನೀಡುವುದಾಗಿ ಗೋಷಿಸಿತ್ತು. ಇಂದು ತೀರ್ಪು ಪ್ರಕಟಿಸಿ, ಹಿಜಾಬ್ ನಿಷೇಧ ಆದೇಶ ಎತ್ತಿ ಹಿಡಿದಿದೆ. ಕಾಲೇಜಿನ ಡ್ರೆಸ್ಕೋಡ್ ನಿರ್ಧಾರದಲ್ಲಿ ನಾವು ಮಧ್ಯ ಪ್ರವೇಶಿಸುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.