ದಿ ಬೆಂಗಳೂರು ಸಿಟಿ ಇನ್ಸ್ಟಿಟ್ಯೂಟ್ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನದ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಸುಕುಮಾರ್ ಕುನ ಅವಿರೋಧವಾಗಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರ ಸ್ಥಾನಕ್ಕೆ ಚಂದ್ರಶೇಖರ್ ಎಸ್.ಸಿ, ಶ್ರೀನಿವಾಸ್ ಸಿ.ಎನ್ ಆಯ್ಕೆಯಾಗಿದ್ದಾರೆ.
ಧನರಾಜ ಬಾಬು ಜಿ, ಲಕ್ಷ್ಮೀಶ ಚಂದ್ರ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆಯಾಗಿದ್ದು, ಗಿರಿವರ್ಧನ್ ಸಿ.ಜಿ , ಸತೀಶ್ ಬಾಬು ಆರ್. ಎಸ್ ಅವರು ಖಜಾಂಚಿಯವರ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಗಳಾದ ನಾಗರಾಜ್ ಟಿ. ಎಸ್ ಮತ್ತು ಉಪ್ಪಿಲಿ ಎನ್ ಅವರು ಫಲಿತಾಂಶ ಪ್ರಕಟಿಸಿದರು.