ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಪರಪ್ಪರ ಅಗ್ರಹಾರ ಜೈಲು ಸೇರಿರುವ ದರ್ಶನ್ ಭೇಟಿಗೆ ಬಂದ ನಟ ಧನ್ವೀರ್, ದರ್ಶನ್ ಭೇಟಿಗಾಗಿ 2 ಗಂಟೆಗಳ ಕಾಲ ಕಾದಿದ್ದಾರೆ.
ಜೈಲಿನ ಹೊರಭಾಗದ ಗೇಟಿನ ಬಳಿಯೇ ಕಾರು ನಿಲ್ಲಿಸಿದ ಧನ್ವೀರ್ ಜೈಲಿನ ಒಳಗೆ ನಡೆದುಕೊಂಡು ಹೋಗಿದ್ದಾರೆ. ಆದರೆ ಜೈಲಿನ ಅಧಿಕಾರಿಗಳು ಸುಮಾರು 2 ಗಂಟೆಗಳ ಬಳಿಕ ದರ್ಶನ್ ಭೇಟಿಗೆ ಅವಕಾಶ ಕಲ್ಪಿಸಿದ್ದಾರೆ ಎನ್ನಲಾಗಿದೆ. ನಂತರ ದರ್ಶನ್ ಭೇಟಿ ಮಾಡಿದ ಧನ್ವೀರ್ ಧೈರ್ಯ ತುಂಬಿದ್ದಾರೆ . ದರ್ಶನ್ ಪರಪ್ಪನ ಅಗ್ರಹಾರ ಸೇರಿದ ಬಳಿಕ ಸಿನಿ ತಾರೆಯರ ದಂಡು ದರ್ಶನ್ ಭೇಟಿಗೆ ಬರುತ್ತಲೇ ಇದ್ದಾರೆ. ಈಗಾಗಲೇ ದರ್ಶನ್ ಆಪ್ತರಾಗಿರುವ ನಟ ವಿನೋದ್ ಪ್ರಭಾಕರ್, ಜೋಗಿ ಪ್ರೇಮ್, ರಕ್ಷಿತಾ ಪ್ರೇಮ್ ಜೈಲಿನಲ್ಲಿ ದರ್ಶನ್ ಭೇಟಿ ಮಾಡಿ ಹೋಗಿದ್ದಾರೆ.