ಬರ್ತಡೇ ಪಾರ್ಟಿಯಲ್ಲಿ ಎಣ್ಣೆ ಸಾಕಾಗಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನನ್ನು ಕಟ್ಟಡದ ನಾಲ್ಕನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್ನಗರದಲ್ಲಿ ನಡೆದಿದೆ. ಕೊಲೆಯಾಗಿರುವ ವ್ಯಕ್ತಿಯನ್ನು 24 ವರ್ಷದ ಕಾರ್ತಿಕ್ ಎಂದು ಗುರುತಿಸಲಾಗಿದೆ .ಸ್ಥಳಕ್ಕೆ ಭೇಟಿ ನೀಡಿದ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜುಲೈ 1 ರಂದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್ನಗರದಲ್ಲಿ ಕಾರ್ತಿಕ್ ಎಂಬುವವನು ತನ್ನ ಮನೆಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು 3 ಸ್ನೇಹಿತರನ್ನು ಆಹ್ವಾನಿಸಿದ್ದ. ಪಾರ್ಟಿ ವೇಳೆ ಎಣ್ಣೆ ಸಾಕಾಗಿಲ್ಲ ಎಂಬ ಕಾರಣಕ್ಕೆ ಸ್ನೇಹಿತರು ಗಲಾಟೆ ಶುರು ಮಾಡಿದ್ದಾರೆ ಬಳಿಕ ಕಾರ್ತಿಕ್ ಮೇಲೆ ಹಲ್ಲೆ ಮಾಡಿದ್ದಾರೆ ಈ ವೇಳೆ ಸಿಟ್ಟಿಗೆದ್ದ ಕಾರ್ತಿಕ್ ಬಾಟಲಿಯಿಂದ ಸ್ನೇಹಿತ ನಿಲೇಶ್ ತಲೆಗೆ ಹೊಡೆದಿದ್ದರಿಂದ ಮೂವರು ಸೇರಿ ಕಾರ್ತಿಕ್ನನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ್ದಾರೆ.ಕೆಳಗೆ ಬಿದ್ದ ಕಾರ್ತಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.