ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನನಿತ್ಯದ ವಾಹನ ಸವಾರರಿಗೆ ಚಿಂತೆಯ ವಿಷಯವಾಗಿವೆ. 2017ರಿಂದ ಇಂಧನ ಬೆಲೆಗಳನ್ನು ಡೈನಾಮಿಕ್ ಫ್ಯೂಯಲ್ ಪ್ರೈಸಿಂಗ್ ವ್ಯವಸ್ಥೆಯಡಿ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪರಿಷ್ಕರಿಸಲಾಗುತ್ತದೆ. ಇದಕ್ಕೂ ಮುಂಚೆ, ಇಂಧನ ದರಗಳನ್ನು ಪ್ರತಿ 15 ದಿನಗಳಿಗೊಮ್ಮೆ ಮಾತ್ರ ಪರಿಷ್ಕರಿಸಲಾಗುತ್ತಿತ್ತು. ಈ ನಿತ್ಯದ ಅಪ್‌ಡೇಟ್ ವಾಹನ ಚಾಲಕರಿಗೆ ಇಂಧನ ದರದಲ್ಲಿನ ಏರಿಳಿತಗಳನ್ನು ತಿಳಿಯಲು ಸಹಾಯಕವಾಗಿದೆ. ಆದರೆ, ಈ ವೀಕೆಂಡ್‌ನಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆಯಾ ಅಥವಾ ಇಳಿಕೆಯಾಗಿದೆಯಾ? ಇಲ್ಲಿದೆ ಸಂಪೂರ್ಣ ವಿವರ.
ಇಂಧನ ಬೆಲೆಯ ಏರಿಳಿತ
ಕಳೆದ ವಾರ ಕೇಂದ್ರ ಸರ್ಕಾರವು ಡೀಸೆಲ್‌ನ ಮೇಲಿನ ಎಕ್ಸೈಸ್ ಡ್ಯೂಟಿಯನ್ನು ಲೀಟರ್‌ಗೆ 2 ರೂ. ಏರಿಕೆ ಮಾಡಿದೆ. ಆದರೆ, ತೈಲ ಕಂಪನಿಗಳು ಈ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸದಿರಲು ನಿರ್ಧರಿಸಿವೆ, ಇದರಿಂದಾಗಿ ರಿಟೇಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೂ, ಈ ತೀರ್ಮಾನವು ಸಾರಿಗೆ ವಲಯದಲ್ಲಿ, ವಿಶೇಷವಾಗಿ ಲಾರಿ ಮಾಲೀಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ವರ್ಷವೂ ಸರ್ಕಾರವು ಇಂಧನ ದರವನ್ನು ಏರಿಕೆ ಮಾಡಿತ್ತು, ಮತ್ತೀಗ ಡೀಸೆಲ್ ದರದ ಸುತ್ತಲಿನ ಚರ್ಚೆಗಳು ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿವೆ.
ಪೆಟ್ರೋಲ್-ಡೀಸೆಲ್ ಬೆಲೆ ಏಕೆ ಏರುತ್ತದೆ?
ಭಾರತವು ತನ್ನ ತೈಲ ಅಗತ್ಯದ 80%ನ್ನು ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ, ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ, ರೂಪಾಯಿ-ಡಾಲರ್ ವಿನಿಮಯ ದರ, ಕೇಂದ್ರದ ಎಕ್ಸೈಸ್ ಡ್ಯೂಟಿ, ಮತ್ತು ರಾಜ್ಯ ಸರ್ಕಾರದ ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಇವು ದೇಶೀಯ ಇಂಧನ ಬೆಲೆಯನ್ನು ನಿರ್ಧರಿಸುತ್ತವೆ. ರಾಜ್ಯದಿಂದ ರಾಜ್ಯಕ್ಕೆ ವ್ಯಾಟ್ ವಿಭಿನ್ನವಾಗಿರುವುದರಿಂದ, ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈನಂತಹ ನಗರಗಳಲ್ಲಿ ಬೆಲೆಗಳು ವಿಭಿನ್ನವಾಗಿರುತ್ತವೆ. ಉದಾಹರಣೆಗೆ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ 94.77 ರೂ./ಲೀ ಇದ್ದರೆ, ಮುಂಬೈನಲ್ಲಿ ಇದು 103.50 ರೂ./ಲೀ ಆಗಿದೆ.
ಬೆಂಗಳೂರು ಸೇರಿ ಮಹಾನಗರದಲ್ಲಿ ತೈಲ ದರ
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 102.92 ಆಗಿದ್ದರೆ ಡೀಸೆಲ್ ದರ ರೂ. 90.99 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.100.80, ರೂ. 103.50, ರೂ. 105.01 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 92.39, ರೂ. 90.03, ರೂ. 91.82 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 94.77 ಆಗಿದ್ದರೆ ಡೀಸೆಲ್ ದರ ರೂ. 87.67 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ – ರೂ. 103.50 (08 ಪೈಸೆ ಏರಿಕೆ)
ಬೆಂಗಳೂರು – ರೂ. 102.92 (00)
ಬೆಂಗಳೂರು ಗ್ರಾಮಾಂತರ – ರೂ. 102.99 (25 ಪೈಸೆ ಇಳಿಕೆ)
ಬೆಳಗಾವಿ – ರೂ. 103.38 (27 ಪೈಸೆ ಇಳಿಕೆ)
ಬಳ್ಳಾರಿ – ರೂ. 104.09 (09 ಪೈಸೆ ಏರಿಕೆ)
ಬೀದರ್ – ರೂ.103.52 (56 ಪೈಸೆ ಇಳಿಕೆ)
ವಿಜಯಪುರ – ರೂ.102.98 (12 ಪೈಸೆ ಇಳಿಕೆ)
ಚಾಮರಾಜನಗರ – ರೂ. 102.91 (33 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ – ರೂ. 103.40 (14 ಪೈಸೆ ಇಳಿಕೆ)
ಚಿಕ್ಕಮಗಳೂರು – ರೂ. 104.08 (00)
ಚಿತ್ರದುರ್ಗ – ರೂ. 103.51 (36 ಪೈಸೆ ಇಳಿಕೆ)
ದಕ್ಷಿಣ ಕನ್ನಡ – ರೂ. 102.09 (65 ಪೈಸೆ ಇಳಿಕೆ)
ದಾವಣಗೆರೆ – ರೂ. 103.87 (00)
ಧಾರವಾಡ – ರೂ. 102.69 (02 ಪೈಸೆ ಏರಿಕೆ)
ಗದಗ – ರೂ. 103.24 (51 ಪೈಸೆ ಇಳಿಕೆ)
ಕಲಬುರಗಿ – ರೂ. 103.29 (12 ಪೈಸೆ ಇಳಿಕೆ)
ಹಾಸನ – ರೂ. 102.63 (45 ಪೈಸೆ ಇಳಿಕೆ)
ಹಾವೇರಿ – ರೂ. 103.59 (17 ಪೈಸೆ ಇಳಿಕೆ)
ಕೊಡಗು – ರೂ. 103.70 (26 ಪೈಸೆ ಇಳಿಕೆ)
ಕೋಲಾರ – ರೂ. 102.85 (00)
ಕೊಪ್ಪಳ – ರೂ. 103.87 (21 ಪೈಸೆ ಇಳಿಕೆ)
ಮಂಡ್ಯ – ರೂ. 103.03 (27 ಪೈಸೆ ಏರಿಕೆ)
ಮೈಸೂರು – ರೂ. 102.69 (07 ಪೈಸೆ ಏರಿಕೆ)
ರಾಯಚೂರು – ರೂ. 103.79 (82 ಪೈಸೆ ಏರಿಕೆ)
ರಾಮನಗರ – ರೂ. 103.28 (04 ಪೈಸೆ ಏರಿಕೆ)
ಶಿವಮೊಗ್ಗ – ರೂ. 103.91 (01 ಪೈಸೆ ಇಳಿಕೆ)
ತುಮಕೂರು – ರೂ. 103.28 (46 ಪೈಸೆ ಇಳಿಕೆ)
ಉಡುಪಿ – ರೂ. 102.90 (09 ಪೈಸೆ ಏರಿಕೆ)
ಉತ್ತರ ಕನ್ನಡ – ರೂ. 102.99 (00)
ವಿಜಯನಗರ – ರೂ. 104.14 (6 ಪೈಸೆ ಏರಿಕೆ)
ಯಾದಗಿರಿ – ರೂ. 103.44 (13 ಪೈಸೆ ಏರಿಕೆ)
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ – ರೂ. 91.55
ಬೆಂಗಳೂರು – ರೂ. 90.99
ಬೆಂಗಳೂರು ಗ್ರಾಮಾಂತರ – ರೂ. 91.05
ಬೆಳಗಾವಿ – ರೂ. 91.45
ಬಳ್ಳಾರಿ – ರೂ. 92.22
ಬೀದರ್ – ರೂ. 91.57
ವಿಜಯಪುರ – ರೂ. 91.07
ಚಾಮರಾಜನಗರ – ರೂ.90.98
ಚಿಕ್ಕಬಳ್ಳಾಪುರ – ರೂ. 91.43
ಚಿಕ್ಕಮಗಳೂರು – ರೂ. 92.17
ಚಿತ್ರದುರ್ಗ – ರೂ. 91.44
ದಕ್ಷಿಣ ಕನ್ನಡ – ರೂ. 90.18
ದಾವಣಗೆರೆ – ರೂ. 92.09
ಧಾರವಾಡ – ರೂ. 90.80
ಗದಗ – ರೂ. 91.31
ಕಲಬುರಗಿ – ರೂ. 91.36
ಹಾಸನ – ರೂ. 90.62
ಹಾವೇರಿ – ರೂ. 91.64
ಕೊಡಗು – ರೂ. 91.67
ಕೋಲಾರ – ರೂ. 90.93
ಕೊಪ್ಪಳ – ರೂ. 91.90
ಮಂಡ್ಯ – ರೂ. 91.10
ಮೈಸೂರು – ರೂ.90.79
ರಾಯಚೂರು – ರೂ.91.84
ರಾಮನಗರ – ರೂ. 91.33
ಶಿವಮೊಗ್ಗ – 92.12
ತುಮಕೂರು – ರೂ.91.33
ಉಡುಪಿ – ರೂ. 90.93
ಉತ್ತರ ಕನ್ನಡ – ರೂ. 91.08
ಯಾದಗಿರಿ – ರೂ. 91.49