ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್ ಕನ್ನಡ ಹಾಗೂ ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸಿ ಜನಪ್ರಿಯತೆ ಗಳಸಿದ್ದಾರೆ. ತಮಿಳು ಖ್ಯಾತ ನಟ ಶರತ್ ಕುಮಾರ್ ಅವರ ಪುತ್ರಿ ವರಲಕ್ಷ್ಮಿ ಮದುವೆ ಸಂಭ್ರಮದಲ್ಲಿದ್ದಾರೆ.
ವರಲಕ್ಷ್ಮೀ ಶರತ್ ಕುಮಾರ್ ಹಾಗೂ ನಿಕೋಲೈ ಸಚ್ದೇವ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮುಂಬೈ ಮೂಲದ ಗ್ಯಾಲರಿಸ್ಟ್ ನಿಕೋಲೈ ಸಚ್ದೇವ್. ವರಲಕ್ಷ್ಮೀ ಶರತ್ ಕುಮಾರ್ಗೆ ನಿಕೋಲೈ ಸಚ್ದೇವ್ 14 ವರ್ಷಗಳಿಂದ ಪರಿಚಯ. ಬಹು ಕಾಲದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.
ಈಗಾಗಲೇ ವಿವಾಹ ಪೂರ್ವ ಶಾಸ್ತ್ರಗಳು ಮುಕ್ತಾಯವಾಗಿದ್ದು, ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮ ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗಿ ನಡೆದಿದೆ.
ವರಲಕ್ಷ್ಮೀ ಶರತ್ ಕುಮಾರ್ – ನಿಕೋಲೈ ಸಚ್ದೇವ್ ಅವರ ಸಂಗೀತ ಸಮಾರಂಭದಲ್ಲಿ ತಾರೆಯರು ಭಾಗವಹಿಸಿದ್ದರು.