ಕನ್ನಡತಿ ಸೀರಿಯಲ್ ಖ್ಯಾತಿಯ ಕಿರಣ್ ರಾಜ್ ಯಾರಿಗೆ ಗೊತ್ತಿಲ್ಲ ಹೇಳಿ ಇಡೀ ಕರ್ನಾಟಕಕ್ಕೆ ಚಿರಪರಿಚಿತರು. ಸಹಜ ಅಭಿನಯದ ಮೂಲಕ ಮನೆಮಾತಾಗಿರೋ ಕಿರಣ್ ರಾಜ್, ನಟನೆಯ ಮೂಲಕವೇ ಮೀನಾ ತೂಗುದೀಪ್ ಅವರ ಮನಸ್ಸು ಗೆದ್ದಿದ್ದಾರೆ. ಕಿರಣ್ ಅಭಿನಯ ಕಂಡು ಥ್ರಿಲ್ಲಾದ ಮೀನಮ್ಮ ಒಮ್ಮೆ ಮೈಸೂರಿನ ತಮ್ಮ ನಿವಾಸಕ್ಕೆ ಕರೆದು ಊಟ ಹಾಕಿದ್ರಂತೆ. ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡ್ತೀಯಾ, ಚಿತ್ರರಂಗದಲ್ಲಿ ಒಳ್ಳೆ ಭವಿಷ್ಯವಿದೆ ಅಂತೇಳಿ ಹಾರೈಸಿದ್ರಂತೆ. ಈ ಮಾತನ್ನ ಗ್ಯಾರಂಟಿ ನ್ಯೂಸ್ ಚಾನಲ್ ಜೊತೆ ಮೆಲುಕು ಹಾಕಿದ ನಟ ಕಿರಣ್ ರಾಜ್, ತೂಗುದೀಪ್ ಕುಟುಂಬದ ಅನ್ನದ ಋಣ ನನ್ನ ಮೇಲಿದೆ ಎಂದರು.
ಇದೇ ವೇಳೆ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿರುವ ದರ್ಶನ್ ಅವರ ಬಗ್ಗೆ ಪ್ರತಿಕ್ರಿಯಿಸಿದರು. ಸದ್ಯ ಈ ಪ್ರಕರಣ ನ್ಯಾಯಾಲಯಲ್ಲಿದೆ. ಹೀಗಿರುವಾಗ ನಾವು ಏನು ಮಾತನಾಡಿದ್ರೂ ಅದು ತಪ್ಪಾಗುತ್ತೆ. ಜಡ್ಜ್ ಮೆಂಟ್ ಬಂದಾಕ್ಷಣವೇ ನಾವು ನಮ್ಮ ಅಭಿಪ್ರಾಯ, ಅನಿಸಿಕೆ ಹಂಚಿಕೊಳ್ಳೋದು ಸರಿ ಅನ್ಸುತ್ತೆ. ದಯವಿಟ್ಟು ಕಾನೂನಿನ ಮುಂದೆ ಯಾರು ದೊಡ್ಡವರಲ್ಲ ಕಾದು ನೋಡೋಣವೆಂದೇ ಅವರು ತಿಳಿಸಿದರು.
ಸದ್ಯ ಕಿರಣ್ ರಾಜ್ ರಾನಿ ಸಿನಿಮಾದ ಬಿಡುಗಡೆಗೆ ಎದುರುನೋಡ್ತಿದ್ದಾರೆ. ಇದೇ ವರ್ಷ ಆರಂಭದಲ್ಲಿ ಭರ್ಜರಿ ಗಂಡು ಸಿನಿಮಾದ ಮೂಲಕ ಬಿಗ್ ಸ್ಕ್ರೀನ್ ಗೆ ಎಂಟ್ರಿಕೊಟ್ಟಿದ್ದರು. ಆದರೆ, ಆ ಸಿನಿಮಾಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ. ಇದೀಗ ಸೆಕೆಂಡ್ ಹಾಫ್ ನಲ್ಲಿ ರಾನಿ ಮೂಲಕ ಮತ್ತೆ ಬರ್ತಿದ್ದಾರೆ. ಈಚಿತ್ರಕ್ಕಾಗಿ ಸಾಕಷ್ಡು ರಿಸ್ಕ್ ತಗೊಂಡು ಕೆಲಸ ಮಾಡಿದ್ದಾರೆ. ಸ್ಕೂಬ್ ಡೈವ್, ಪ್ಯಾರಾಗ್ಲೈಡಿಂಗ್ ಮೂಲಕ ನೋಡುಗರನ್ನ ಥಂಡಾ ಹೊಡೆಸಿರೋ ಕಿರಣ್ ರಾಜ್, ಹೈವೋಲ್ಟೇಜ್ ಆಕ್ಷನ್ ಮೂಲಕ ಫ್ಯಾಮಿಲಿ ಆಡಿಯನ್ಸ್ ಗೆ ಥ್ರಿಲ್ ನೀಡಲು ಬರ್ತಿದ್ದಾರೆ. ಬಡ್ಡೀಸ್ ನಂತರ ಗುರು ತೇಜ್ ಶೆಟ್ಟಿ ಹಾಗೂ ಕಿರಣ್ ಕಾಂಬೋ ಜೊತೆಯಾಗಿದ್ದು ರಾನಿ ಮೇಲೆ ನಿರೀಕ್ಷೆ ಹೆಚ್ಚಿದೆ. ಇದೇ ಆಗಸ್ಡ್ 30 ರಂದು ಸಿನಿಮಾ ಅದ್ದೂರಿಯಾಗಿ ತೆರೆಗಪ್ಪಳಿಸಲಿದೆ.