ಸಪ್ತ ಸಾಗರದಾಚೆಯೆಲ್ಲೋ ಸಿನಿಮಾ ಮೂಲಕ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದ ಚೈತ್ರಾ ಆಚಾರ್ ತಮ್ಮ ಮೋಹಕ ಫೋಟೋಶೂಟ್ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಚೈತ್ರಾ ಆಚಾರ್ ಕಾಲಿವುಡ್ ಗೆ ಎಂಟ್ರಿ ಕೊಡುವುದರ ಮೂಲಕ ಮತ್ತೆ ಸುದ್ದಿಯಲ್ಲಿದಾರೆ. ರಾಜುಮುರುಗನ್ ನಿರ್ದೇಶನದ ಮೂಲಕ ಕಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ ಚೈತ್ರಾ ಆಚಾರ್.
ರಾಜು ಮುರುಗನ್ ನಿರ್ದೇಶನದ ಈ ಚಿತ್ರದಲ್ಲಿ ನಟ ಶಶಿಕುಮಾರ್ ಅವರಿಗೆ ಚೈತ್ರಾ ಜೋಡಿಯಾಗಿದ್ದಾರೆ, 135 ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅನುಭವಿ ತಾರೆಯ ಎದುರು ಅವರ ಚೊಚ್ಚಲ ಸಿನಿಮಾವಾಗಿದೆ.ಚೈತ್ರಾ ಆಚಾರ್ ಕನ್ನಡ ಚಿತ್ರರಂಗದಲ್ಲಿ ಪರಿಚಿತ ಮುಖವಾಗಿದ್ದಾರೆ. ಗಿಲ್ಕಿ, ಟೋಬಿಯಂತಹ ಅವರ ಪಾತ್ರಗಳಿಗೆ ಮತ್ತು ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರದಲ್ಲಿನ ಅವರ ಇತ್ತೀಚಿನ ನಟನೆಗಾಗಿ ಮೆಚ್ಚುಗೆ ಗಳಿಸಿದ್ದಾರೆ. ಸದ್ಯ ಚೈತ್ರಾ ಆಚಾರ್ ಇತರ ಭಾಷೆಗಳಿಗೆ ತಮ್ಮ ನಟನಾ ಪರಿಧಿಯನ್ನು ವಿಸ್ತರಿಸುತ್ತಿದ್ದಾರೆ, ಅವರ ತಮಿಳಿನ ಚೊಚ್ಚಲ ಸಿನಿಮಾಗೆ ಸಹಿ ಹಾಕಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಅವರು ಎರಡು ತಮಿಳು ಪ್ರಾಜೆಕ್ಟ್ಗಳಿಗೆ ಸಹಿ ಹಾಕಿದ್ದಾರೆ, ಈಗಾಗಲೇ ಒಂದರ ಶೂಟಿಂಗ್ ನಡೆಯುತ್ತಿದೆ. ರಾಜು ಮುರುಗನ್ ನಿರ್ದೇಶನದ ಈ ಚಿತ್ರದಲ್ಲಿ ನಟ ಶಶಿಕುಮಾರ್ ಅವರಿಗೆ ಚೈತ್ರಾ ಜೋಡಿಯಾಗಿದ್ದಾರೆ, 135 ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಅನುಭವಿ ತಾರೆಯ ಎದುರು ಅವರ ಚೊಚ್ಚಲ ಸಿನಿಮಾವಾಗಿದೆ.
ಖ್ಯಾತ ಛಾಯಾಗ್ರಾಹಕ ಶಿವಕುಮಾರ್ ಈ ಗ್ರಾಮೀಣ ಕೌಟುಂಬಿಕ ಕಥೆಗೆ ದೃಶ್ಯಗಳನ್ನು ಸಂಯೋಜಿಸುತ್ತಿ್ದಾರೆ, ಪ್ರಸ್ತುತ ಕೋವಿಲ್ಪಟ್ಟಿಯಲ್ಲಿ ಶೂಟಿಂಗ್ ನಡೆಸಲಾಗುತ್ತಿದೆ. ಕನ್ನಡಕ್ಕೆ ಸಂಬಂಧಿಸಿದಂತೆ, ಚೈತ್ರ ಆಚಾರ್ ಕೊನೆಯದಾಗಿ ಕಾಣಿಸಿಕೊಂಡಿದ್ದು ಹ್ಯಾಪಿ ಬರ್ತ್ಡೇ ಟು ಮಿ ಸಿನಿಮಾದಲ್ಲಿ, ಇದು ನೇರ OTT ಬಿಡುಗಡೆಯಾಗಿದೆ. ಜೊತೆಗೆ ರೋಹಿತ್ ಪದಕಿಯ ಉತ್ತರಕಾಂಡ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಇದು ದಿಗಂತ್, ಧನಂಜಯ್ ಮತ್ತು ಐಶ್ವರ್ಯಾ ರಂಗರಾಜನ್ ನಟಿಸಿರುವ ಗ್ಯಾಂಗ್ಸ್ಟರ್ ಕಥೆಯುಳ್ಳ ಸಿನಿಮಾವಾಗಿದೆ.