ರಾಜ್ಯದಲ್ಲಿ ಮುಂಗಾರು ಅಬ್ಬರ ಮುಂದುವರೆದಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ. ರಾಜ್ಯದ ಜಲಾಶಯ, ಜಲಪಾತಗಳಿಗೆ ಜೀವ ಕಳೆ ಬಂದಿದೆ. ಇಂದು ಕೆ ಆರ್ಎಸ್ ನೀರಿನ ಮಟ್ಟ 102 ಅಡಿಗೆ ಏರಿಕೆತಾಗಿದೆ. ಡ್ಯಾಂನ ಮಟ್ಟ ಏರಿಕೆಯಾದ ಹಿನ್ನೆಲೆ ಮಂಡ್ಯ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಹೆಚ್ಡಿ ಕೋಟೆಯ ತಾಲೂಕಿನ ಬೀಚನಹಳ್ಳಿ ಗ್ರಾಮ ಬಳಿಯ ಕಬಿನಿ ಡ್ಯಾಂ ಬಹುತೇಕ ಭರ್ತಿಯಾದಂತೆ ಆಗಿದೆ. ಕೇವಲ ಒಂದೂವರೆ ಅಡಿ ಮಾತ್ರ ಬಾಕಿ ಇದೆ. ಕೇರಳದ ವೈನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕಬಿನಿ ಜಲಾಶಯದ ಒಳಹರಿವಿನಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಇನ್ನೇನು ಕಬಿನಿ ಜಲಾಶಯ ತುಂಬಲಿದೆ. ಆದರೆ ಜಲಾಶಯದ ಹಿತದೃಷ್ಠಿಯಿಂದ ಅಧಿಕಾರಿಗಳು 2 ಅಡಿಯಷ್ಟು ಖಾಲಿಯಾಗಿ ಇಡಲು ನೀರನ್ನು ನದಿಗೆ ಬಿಡುಗಡೆ ಮಾಡುತ್ತಾರೆ. ಈ ವರ್ಷದಲ್ಲಿ ಎಲ್ಲ ಡ್ಯಾಂಗಳಿಗಿಂತ ಮೊದಲೇ ಕಬಿನಿ ಜಲಾಶಯ ತುಂಬುತ್ತಿರುವುದು ಜನರಿಗೆ, ರೈತರಿಗೆ ಸಂತಸ ತಂದಿದೆ.