16 ಬಾರಿಯ ವಿಶ್ವ ಚಾಂಪಿಯನ್, ಡಬ್ಲ್ಯೂ ಡಬ್ಲ್ಯೂ ಇ ಸೂಪರ್ ಸ್ಟಾರ್ ಜಾನ್ ಸೀನ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ವಿದಾಯ ಘೋಷಿಸಿದ್ದಾರೆ. 2025 ರಲ್ಲಿ ರಿಂಗ್ನಲ್ಲಿ ತನ್ನ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಜಾನ್ ಸೀನ ಹೇಳಿದ್ದಾರೆ.
ಟೊರಾಂಟೊದಲ್ಲಿ ನಡೆದ ಮನಿ ಇನ್ ದಿ ಬ್ಯಾಂಕ್ ಲೈವ್ ಕಾರ್ಯಕ್ರಮದಲ್ಲಿ ಅಚ್ಚರಿಯ ಎಂಟ್ರಿ ಕೊಟ್ಟ ಜಾನ್ ಸೀನ ತನ್ನ ನಿರ್ಧಾರ ಪ್ರಕಟಿಸಿ ಅಭಿಮಾನಿ ವರ್ಗಕ್ಕೆ ಶಾಕ್ ನೀಡಿದರು. ಸೆನಾ ಕಂಪನಿಯಿಂದ ನಿವೃತ್ತಿ ಘೋಷಿಸುವ ಮೊದಲು, ಟೊರೊಂಟೊದಲ್ಲಿ ಪ್ರೇಕ್ಷಕರಿಗೆ ಡಬ್ಲ್ಯೂ ಡಬ್ಲ್ಯೂ ಇ ಹಾಲ್ ಫೇಮರ್ ಟ್ರಿಶ್ ಸ್ಟ್ರಾಟಸ್ ಪರಿಚಯಿಸಿದರು. 16 ಬಾರಿಯ ವಿಶ್ವ ಚಾಂಪಿಯನ್ ಜಾನ್ ಸೀನ ರೆಸಲ್ ಮೇನಿಯಾ 41ರಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಳ್ಳುವುದಾಗಿ ಹೇಳಿದ್ದಾರೆ.
2002 ರಲ್ಲಿ ಡಬ್ಲ್ಯೂ ಡಬ್ಲ್ಯೂ ಇ ಕಂಪನಿಗೆ ಸೇರಿದ ಜಾನ್ ಸೀನ ಶೀಘ್ರದಲ್ಲಿ ಜನ ಮೆಚ್ಚುವ ಪಟುವಾಗಿ ಬೆಳೆದವರು. 13 ಬಾರಿ ಡಬ್ಲ್ಯೂಡಬ್ಲ್ಯೂಇ ಟೈಟಲ್, ಮೂರು ಬಾರಿ ಹೆವಿವೈಟ್ ಚಾಂಪಿಯನ್ಶಿಪ್ ಮತ್ತು ಎರಡು ಬಾರಿ ರಾಯಲ್ ರಂಬಲ್ ಗೆಲುವು ಸಾಧಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಾಲಿವುಡ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾರಣ ಡಬ್ಲ್ಯೂ ಡಬ್ಲ್ಯೂಇ ರಿಂಗ್ ನಲ್ಲಿ ಅಪರೂಪವಾಗಿದ್ದರು.