ವಿಜಯಪುರ ಜಿಲ್ಲೆಯ ತಿಕೋಟಾ ಭಾಗದಲ್ಲಿ ಶನಿವಾರ ರಾತ್ರಿ ಭೂಕಂಪದ ಅನುಭವ ಆಗಿದ್ದು, ಭೂಮಿ ಅದುರುತ್ತಲೇ ಭಯಗೊಂಡ ಜನರು ಮನೆಯಿಂದ ಹೊರಗೋಡಿ ಬಂದಿದ್ದಾರೆ. ಶನಿವಾರ ರಾತ್ರಿ 10:26 ರ ಸುಮಾರಿಗೆ ಭಾರಿ ಸದ್ದಿನೊಂದಿಗೆ ಭೂಮಿ ಕಂಪಿಸುತ್ತಲೇ ಮನೆಯ ಮೇಲ್ಭಾಗದಲ್ಲಿನ ಸಾಮಗ್ರಿಗಳು ಅಲುಗಾಡಿ ಕೆಳಗೆ ಬಿದ್ದಿವೆ. ಊಟ ಮಾಡಿ ಮಲಗುವ ಸಿದ್ಧತೆಯಲ್ಲಿದ್ದ ಜನರು ಭಯಗೊಂಡು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ತಿಕೋಟಾ ತಾಲೂಕಿನ ಘೋಣಸಗಿ, ಸೋಮದೇವರಹಟ್ಟಿ, ಹುಬನೂರ, ಮಲಕನದೇವರಹಟ್ಟಿ, ಕಳ್ಳಕವಟಗಿ ಟಕ್ಕಳಕಿ ಭಾಗದಲ್ಲಿ ರಾತ್ರಿ 9:26 ಕ್ಕೆ ಭೂಕಂಪನದ ಅನುಭವ ಎಂದು ಆ ಭಾಗದ ಜನರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.