ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಬಿಜೆಪಿ ವರ್ಸಸ್ ಜೆಡಿಎಸ್ ಫೈಟ್ ಜೋರಾಗಿದೆ. ಮೈತ್ರಿಕೂಟದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕುತೂಹಲ, ಗೊಂದಲ, ದಿನಕ್ಕೊಂದು ಹೇಳಿಕೆ, ದಿನಕ್ಕೊಂದು ತಿರುವು, ಅಭ್ಯರ್ಥಿ ಯಾರೆಂಬ ಪ್ರಶ್ನೆ ನಿಗೂಢವಾಗಿಯೇ ಉಳಿದಿದೆ. ನಾನೇ ಅಭ್ಯರ್ಥಿ ಅಂತಿದ್ದಾರೆ ಬಿಜೆಪಿ ಎಂಎಲ್ಸಿ ಸಿ.ಪಿ. ಯೋಗೇಶ್ವರ್, ಆದರೆ ಸಾಧ್ಯನೇ ಇಲ್ಲ ಅಂತಿದ್ದಾರೆ ಜೆಡಿಎಸ್ ನಾಯಕರು.
ಚನ್ನಪಟ್ಟಣ ಟಿಕೆಟ್ ನಿರ್ಧಾರ ಆಗಿಲ್ಲ ಎಂದಿರೋ ಹೆಚ್.ಡಿ. ಕುಮಾರಸ್ವಾಮಿ, ನಿಖಿಲ್ ಹಾಗು ಅನುಸೂಯ ಹೆಸರು ಕೇಳಿಬರ್ತಿದೆ ಎಂಬ ಹೊಸ ವಿಚಾರವನ್ನ ತೆರೆದಿಟ್ಟಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ಧ ಸೋತಿದ್ದ ಯೋಗೇಶ್ವರ್ ಗೆ ಪ್ರತಿಷ್ಠೆಯ ಕ್ಷೇತ್ರವಾಗಿದೆ ಚನ್ನಪಟ್ಟಣ. ಯಾರಿಗೆ ಒಲಿಯುತ್ತೆ ಚನ್ನಪಟ್ಟಣ ಕ್ಷೇತ್ರ? ಯೋಗೇಶ್ವರ್ ನಡೆ ಏನು? ಜೆಡಿಎಸ್ ಗೆ ಕ್ಷೇತ್ರ ಬಿಟ್ಟು ಕೊಟ್ರೆ ಯೋಗೇಶ್ವರ್ ಬಿಜೆಪಿಯಲ್ಲೇ ಇರ್ತಾರಾ? ಅಥವಾ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳೀತಾರಾ? ಎಂಬ ಪ್ರಶ್ನೆಗಳಿಗೆ ಉತ್ತರ ಕಾದುನೋಡಬೇಕಿದೆ.