ಕನ್ನಡ ಕಿರುತೆರೆಯಲ್ಲಿ ಗೊಂಬೆ, ಬಿಗ್ಬಾಸ್ ಬೆಡಗಿ ನೇಹಾ ಗೌಡ ಮನೆಯಲ್ಲಿ ಸಂತಸ ಮನೆ ಮಾಡಿದೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಕನ್ನಡಿಗರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿರೋ ನೇಹಾ ಗೌಡ ದಂಪತಿ ಜೂನ್ 1ರಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು.
ಮದುವೆಯಾಗಿ 6 ವರ್ಷಗಳ ಬಳಿಕ ನೇಹಾ ಹಾಗೂ ಚಂದನ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ನೇಹಾ ಗೌಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬ್ಯೂಟಿಫುಲ್ ಬೇಬಿ ಬಂಪ್ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ಫೋಟೋವನ್ನು ಶೇರ್ ಮಾಡಿಕೊಂಡ ನಟಿ, ಪ್ರಕೃತಿಯ ಪ್ರಶಾಂತತೆಯಿಂದ ಸುತ್ತುವರೆದಿರುವ ಕೂರ್ಗ್ನಲ್ಲಿ ವಿಶ್ರಾಂತಿಯ ವಿಹಾರವನ್ನು ಆನಂದಿಸುತ್ತಿದ್ದೇವೆ. ಅದನ್ನು ಸುಲಭವಾಗಿ ತೆಗೆದುಕೊಳ್ಳುವುದು, ಶಾಂತತೆಯನ್ನು ನೆನೆಯುವುದು ಮತ್ತು ಈ ವಿಶೇಷ ಸಮಯದ ಪ್ರತಿ ಕ್ಷಣವನ್ನು ಸವಿಯುವುದು ಎಂದು ಬರೆದುಕೊಂಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದೇ ಫೋಟೋಗಳನ್ನು ನೋಡಿದ ನೆಟ್ಟಿಗರು, ನಮ್ಮ ನೇಹಾ ಅಕ್ಕ, ಕ್ಯೂಟ್ ಬೇಬಿ ಬಂಪ್ ಅಂತಾ ಕಾಮೆಂಟ್ ಮಾಡಿದ್ದಾರೆ. ನೇಹಾ ಗೌಡ ಅವರು ಲಕ್ಷ್ಮೀ ಬಾರಮ್ಮ ಸೀರಿಯಲ್ನಲ್ಲಿ ಗೊಂಬೆ ಪಾತ್ರದಲ್ಲಿ ಅಭಿನಯಿಸಿದವರು. ಗೊಂಬೆ ಪಾತ್ರದ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ನಟಿ ನೇಹಾ ಗೌಡ ಹಾಗೂ ಚಂದನ್ ಗೌಡ ಫೆಬ್ರವರಿ 18, 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಮದುವೆಯಾಗಿ 6 ವರ್ಷಗಳ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.