ಸಚಿವ ಜಮೀರ್ ಅಹಮ್ಮದ್ ಅವರ ಹೊಸ ರೀಲ್ಸ್ವೊಂದು ಸಖತ್ ಸದ್ದು ಮಾಡ್ತಿದೆ. ಜಮೀರ್ ಅಹಮ್ಮದ್ ಅವರು ತಮ್ಮ ಆಪ್ತರೊಂದಿಗೆ ಹಿಂದಿ ಹಾಡಿಗೆ ರೀಲ್ಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಇದನ್ನು ಖಂಡಿಸಿರುವ ರಾಜ್ಯ ಬಿಜೆಪಿ.. ಜಮೀರ್ ಅಹಮ್ಮದ್ ವಿರುದ್ಧ ಕಿಡಿಕಾರಿದೆ. ರಾಜ್ಯದಲ್ಲಿ ಡೆಂಘೀ ಮತ್ತು ಝೀಕಾ ವೈರಸ್ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ ಸಚಿವರೊಬ್ಬರು ರೀಲ್ಸ್ ಮಾಡುತ್ತಾ ಮಜಾ ಮಾಡುತ್ತಿದ್ದಾರೆ. ಆರೋಗ್ಯ ಮತ್ತು ಆರ್ಥಿಕ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿರುವ ಕರ್ನಾಟಕ ಇಂತಹ ಕಠಿಣ ಹಂತವನ್ನು ಎದುರಿಸುತ್ತಿದೆ. ಡೆಂಘೀ, ಝೀಕಾಗೆ ಸುಮಾರು 7 ರಿಂದ 8 ಮಕ್ಕಳು ಸಾವನ್ನಪ್ಪಿರುವ ವರದಿ ಇದೆ. ತರಕಾರಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ತರಕಾರಿ ಇಲ್ಲದೇ ಊಟ ನೀಡಲಾಗುತ್ತಿದೆ.
ರೈತರು ಪೂರೈಸಿದ ಡೈರಿ ಹಾಲಿನ ಹಣವನ್ನು ಇನ್ನೂ ಪಾವತಿಸಿಲ್ಲ. ಇತರೆ ಪ್ರಮುಖ ನಾಯಕರು ವಾಲ್ಮಿಕಿ ಮತ್ತು ದಲಿತರ ಮೀಸಲು ಹಣವನ್ನು ಲೂಟಿ ಮಾಡುತ್ತಿದ್ದರೆ, ಇತರರು ಈಜುಕೊಳದಲ್ಲಿ ಆನಂದಿಸುತ್ತಿದ್ದಾರೆ. ಇಂದು ಮತ್ತೊಬ್ಬ ಸಚಿವರು ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.
https://www.instagram.com/reel/C9Hvpg6JpXM/?utm_source=ig_web_copy_link