ತ್ರಿಪುರಾ ರಾಜ್ಯದಲ್ಲಿ ಏಡ್ಸ್ ರೋಗದಿಂದ 47 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು 828 ವಿದ್ಯಾರ್ಥಿಗಳಲ್ಲಿ ಹೆಚ್ಐವಿ ಪಾಸಿಟಿವ್ ಕಂಡು ಬಂದಿದೆ ಅನ್ನೋ ಆಘಾತಕಾರಿ ಸುದ್ದಿ ವರದಿಯಾಗಿದೆ.
ರಾಜ್ಯಾದ್ಯಂತ 220 ಶಾಲೆಗಳು ಮತ್ತು 24 ಕಾಲೇಜುಗಳು ಮತ್ತು ಕೆಲವು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಇಂಜೆಕ್ಷನ್ ಮೂಲಕ ಡ್ರಗ್ಸ್ ಸೇವಿಸುವುದನ್ನು ಪತ್ತೆ ಹಚ್ಚಲಾಗಿದ್ದು ಇದುವೇ ಹೆಚ್ಐವಿ ಪ್ರಕರಣದ ಹೆಚ್ಚಳದ ಹಿಂದಿನ ಪ್ರಮುಖ ಕಾರಣವೆಂದು ತ್ರಿಪುರಾ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಅಧಿಕಾರಿಗಳು ಹೇಳಿದ್ದಾರೆ.
ಹ್ಯೂಮನ್ ಇಮ್ಯುನೊ ಡಿಫಿಷಿಯೆನ್ಸಿ ವೈರಸ್ ಏಡ್ಸ್ ರೋಗಕ್ಕೆ ಕಾರಣವಾಗುವ ಒಂದು ರೀತಿಯ ವೈರಸ್ ಆಗಿದ್ದು, ಅಸುರಕ್ಷಿತ ಲೈಂಗಿಕತೆ, ಸ್ವಚ್ಛವಾಗಿರದ ಸಿರಿಂಜ್ಗಳ ಬಳಕೆ, ಡ್ರಗ್ಸ್ ತೆಗೆದುಕೊಳ್ಳಲು ಚುಚ್ಚು ಮದ್ದುಗಳನ್ನು ಬಳಸುವುದು, ಬೇರೆ ಬೇರೆ ಜನರ ಔಷದ ಉಪಕರಣಗಳನ್ನು ಹಂಚಿಕೊಳ್ಳುವುದು ಇತ್ಯಾದಿಗಳಿಂದ ಹೆಚ್ಐವಿ ಸೋಂಕು ಹರಡುತ್ತದೆ. ಈ ಸೋಂಕಿನ ಕಾರಣದಿಂದ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ ಮತ್ತು ಇತರ ಸಾಂಕ್ರಾಮಿಕ ರೋಗಗಳ ಅಪಾಯವು ಗಮನಾರ್ಹವಾಗಿ ಹೆಚ್ಚುತ್ತದೆ. ಬಳಿಕ ಈ ಸೋಂಕು ಏಡ್ಸ್ಗೂ ಕಾರಣವಾಗತ್ತದೆ ಎನ್ನಲಾಗಿದೆ.