ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಬುಧವಾರ ವಿಚಾರಣೆಗೆ ಕರೆದಿದೆ ಎಂದು ವರದಿಯಾಗಿದೆ. ಸುಕೇಶ್ ಚಂದ್ರಶೇಖರ್ ಅವರ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಫರ್ನಾಂಡೀಸ್ ಅವರನ್ನು ವಿಚಾರಣೆಗೆ ಕರೆದಿದೆ ಎನ್ನಲಾಗಿದೆ.
ರಾನ್ಬಾಕ್ಸಿಯ ಮಾಜಿ ಪ್ರವರ್ತಕರಾದ ಶಿವಿಂದರ್ ಸಿಂಗ್ ಮತ್ತು ಮಲ್ವಿಂದರ್ ಸಿಂಗ್ ಅವರ ಪತ್ನಿಯರು ಸೇರಿದಂತೆ ಉನ್ನತ ವ್ಯಕ್ತಿಗಳ ವಂಚನೆಗೆ ಸಂಬಂಧಿಸಿದ ಪ್ರಕರಣದಲ್ಲಿ 38 ವರ್ಷದ ಶ್ರೀಲಂಕಾ ಮೂಲದ ನಟಿಯನ್ನು ಫೆಡರಲ್ ಏಜೆನ್ಸಿ ಈ ಹಿಂದೆ ಹಲವು ಬಾರಿ ಪ್ರಶ್ನಿಸಿದೆ.
ಚಂದ್ರಶೇಖರ್ ಸಿಂಗ್ ಸಹೋದರರ ಪತ್ನಿಯರನ್ನು ವಂಚಿಸಿದ್ದಾರೆ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಉಡುಗೊರೆಗಳನ್ನು ಖರೀದಿಸಲು ಈ “ಅಪರಾಧದ ಆದಾಯ” ಅಥವಾ ಅಕ್ರಮ ಹಣವನ್ನು ಬಳಸಿದ್ದಾರೆ ಇಡಿ ಆರೋಪಿಸಿದೆ.
“ನಟಿ ಚಂದ್ರಶೇಖರ್ ಅವರ ಅಪರಾಧಗಳ ಬಗ್ಗೆ ತಿಳಿದಿದ್ದರೂ ಸಹ ಚಂದ್ರಶೇಖರ್ ನೀಡಿದ ಬೆಲೆಬಾಳುವ ವಸ್ತುಗಳು, ಆಭರಣಗಳು ಮತ್ತು ದುಬಾರಿ ಉಡುಗೊರೆಗಳನ್ನು ಬಳಸಿಕೊಂಡಿದ್ದಾರೆ ಎಂದು 2022 ರಲ್ಲಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಹೇಳಿತ್ತು. ಆದರೆ ನಟಿ ಜಾಕ್ವೆಲಿನ್ ತನಗೆ ಚಂದ್ರಶೇಖರ್ ಅವರ ಅಪರಾಧ ಚಟುವಟಿಕೆಗಳ ಬಗ್ಗೆ ಮಾಹಿತಿಯಿಲ್ಲ. ನಾನು ನಿರಪರಾಧಿ ಎಂದು ಹೇಳಿದ್ದರು.