ಗರ್ಭಿಣಿ ಮಹಿಳೆಯರಿಗೆ, ವಿಶೇಷ ಚೇತನರಿಗೆ, ವೃದ್ಧರಿಗೆ ಉಚಿತ ವಾಹನ ವ್ಯವಸ್ಥೆಯನ್ನು ಕಲ್ಪಿಸುವ ಹೃದಯವಂತರನ್ನು ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ಬಾರ್ನಲ್ಲಿ ಕುಡಿದು ತೂರಾಡುವ ಕುಡುಕರಿಗೂ ಕೂಡಾ ಉಚಿತ ಆಟೋ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕುಡುಕರು ಅತಿಯಾಗಿ ಎಣ್ಣೆ ಹೊಡೆದ್ರೆ, ನಶೆಯಲ್ಲಿ ತಾವೇನು ಮಾಡುತ್ತಿದ್ದೇವೆ ಎಂಬ ಅರಿವು ಕೂಡಾ ಅವರಿಗೆ ಇರೋದಿಲ್ಲ. ಇನ್ನೂ ಕುಡಿದು ಟೈಟ್ ಆದ್ರೆ ಅವರಿಗೆ ನೆಟ್ಟಗೆ ನೆಲದ ಮೇಲೆ ನಿಲ್ಲಲು ಕೂಡಾ ಕಷ್ಟಸಾಧ್ಯವಾಗುತ್ತದೆ. ಹೀಗೆ ಕಂಠಪೂರ್ತಿ ಕುಡಿದು ರಸ್ತೆ ಬದಿಯಲ್ಲಿ ತೂರಾಡುತ್ತಾ ಹೋಗುವ, ಸಾರ್ವಜನಿಕರಿಗೆ ತೊಂದರೆ ಕೊಡುವ ಕುಡುಕರನ್ನೂ ನೀವು ಕೂಡಾ ನೋಡಿರುತ್ತಿರಿ ಅಲ್ವಾ. ಇಂತಹ ಕುಡುಕರಿಗೆ ಇದೀಗ ಇಲ್ಲೊಂದು ಬಾರ್ನಲ್ಲಿ ಉಚಿತ ವಾಹನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.