ಕ್ಯಾನ್ಸರ್ ಕಾಯಿಲೆಯಿಂದ ಅಗಲಿರುವ ಅಪರ್ಣಾಗೆ ಪತಿ ನಾಗರಾಜ್ ವಸ್ತಾರೆ ಕವನದ ನಮನ ಅರ್ಪಿಸಿದ್ದಾರೆ. ಪತಿ ನಾಗರಾಜ್ ವಸ್ತಾರೆ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಸುಂದರವಾದ ಫೋಟೋದೊಂದಿಗೆ ಕವನ ಹಂಚಿಕೊಂಡಿದ್ದಾರೆ.
” ಬೆಳಗಿಕೊಂಡಿರೆಂದು
ಕಿಡಿ ತಾಕಿಸಿ ಹೊರಟಿತು
ಹೆಣ್ಣು
ಚಿತ್ತು ತೆಗೆದು
ಬತ್ತಿಯ ನೆತ್ತಿ ಚೆನ್ನಾಗಿಸಿ
ತಿರುಪಿ ತಿದ್ದಿ
ಇರು
ತುಸುವಿರೆಂದು ಕರೆದರೂ
ನಿಲ್ಲದೆಯೇ
ಬೇರಾವುದೋ ಕರೆಗೆ
ತಣ್ಣಗೆ ಓಗೊಟ್ಟ ಮೇರೆಯಲ್ಲಿ
ಒಂದೇ ಒಂದು ನಿಮಿಷ
ಬಂದೇನೆಂದು ಕಡೆಗಳಿಗೆಯ
ಸೆರಗಿನ ಬೆನ್ನಿನಲ್ಲಿ ಅಂದು
ಕಾದಿದ್ದೇನೆಈಗ ಬಂದಾಳೆಂದು
ಆಗ ಬಂದಾಳೆಂದು
ಮರಳಿ
ಜೀವ ತಂದಾಳೆಂದು
ಇದು
ಮೂರನೇ ದಿವಸ
ಇಷ್ಟಾಗಿ
ಬೆಳಗಲಿಟ್ಟ ಕಿರಿಸೊಡರ
ಬೆಳಕು ನಾನು
ಉರಿವುದಷ್ಟೇ ಕೆಲಸ
ಇರುವ ತನಕ”.
ಅಪರ್ಣಾ ನಿಧನದ ಬಳಿಕ ವಿಡಿಯೋವೊಂದನ್ನು ಹಂಚಿಕೊಂಡಿರುವ ಪತಿ, “ಕುಟುಂಬ ದುಃಖದಲ್ಲಿದೆ ಎಂದು ಹೇಳಿಕೊಂಡಿದ್ದಾರೆ.
ಅಗಲಿದ ಅಪರ್ಣಾಗೆ ಪತಿಯ ಕವನ ನಮನ!
ಕ್ಯಾನ್ಸರ್ ಕಾಯಿಲೆಯಿಂದ ಅಗಲಿರುವ ಅಪರ್ಣಾಗೆ ಪತಿ ನಾಗರಾಜ್ ವಸ್ತಾರೆ ಕವನದ ನಮನ ಅರ್ಪಿಸಿದ್ದಾರೆ. ಪತಿ ನಾಗರಾಜ್ ವಸ್ತಾರೆ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಸುಂದರವಾದ ಫೋಟೋದೊಂದಿಗೆ ಕವನ ಹಂಚಿಕೊಂಡಿದ್ದಾರೆ.