ಕೆಜಿಎಫ್ ಸರಣಿ ಎಷ್ಟು ಹಿಟ್ ಆಗಿದೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಇದರಲ್ಲಿನ ದೃಶ್ಯಗಳು, ಸಾಹಸ ದೃಶ್ಯಗಳು ಮತ್ತು ಹೀರೋಯಿಸಂ ಎಲಿವೇಶನ್ ದೃಶ್ಯಗಳಿಗೆ ದಕ್ಷಿಣ ಹಾಗೂ ಉತ್ತರ ಭಾರತದ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಸೂಪರ್ ಹಿಟ್ ಸರಣಿಯೊಂದಿಗೆ ನಾಯಕ ಯಶ್ ಪ್ಯಾನ್ ಇಂಡಿಯಾ ರೇಂಜ್ನಲ್ಲಿ ಗುರುತಿಸಿಕೊಂಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಎಲ್ಲರ ಫೇವರಿಟ್ ಆಗಿದ್ದಾರೆ. ವಿಭಿನ್ನ ಚಿತ್ರಕಥೆ ಮತ್ತು ಮಾಸ್ ಹೀರೋಯಿಸಂ ದೃಶ್ಯಗಳೊಂದಿಗೆ ಸರಳವಾದ ಕಥೆಯನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ ರೀತಿಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಯಶ್ ಅವರ ನಟನೆ ಮತ್ತು ನೀಲ್ ಅವರ ನಿರ್ದೇಶನದ ಜೊತೆಗೆ ಸಂಗೀತವು ಕೂಡ ಈ ಚಿತ್ರಕ್ಕೆ ಜೀವ ತುಂಬಿದೆ. ಬಾಲಿವುಡ್ನಲ್ಲಿ ಭರ್ಜರಿ ಹಿಟ್ ಆಗಿರುವ ‘ಕೆಜಿಎಫ್’ ಸರಣಿಯಿಂದ ಮುಂದಿನ ಸಿನಿಮಾ ಯಾವಾಗ ಬರಲಿದೆ ಎಂದು ಅಭಿಮಾನಿಗಳೆಲ್ಲ ಕಾತರದಿಂದ ಕಾಯುತ್ತಿದ್ದಾರೆ.
ಕೆಜಿಎಫ್-2 ಬಳಿಕ ಪ್ರಶಾಂತ್ ನೀಲ್ ರೆಬೆಲ್ ಸ್ಟಾರ್ ಪ್ರಭಾಸ್ ಜೊತೆ ಸಲಾರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈಗ ಅದೇ ಸಿನಿಮಾದ ಸೀಕ್ವೆಲ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದಾದ ನಂತರ ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಜೊತೆ ಸಿನಿಮಾ ಮಾಡಲಿದ್ದಾರೆ. ಸದ್ಯ ನೀಲ್ ತುಂಬಾ ಬಿಜಿಯಾಗಿರುವ ಕಾರಣ ಕೆಜಿಎಫ್ 3 ಸಿನಿಮಾ ಬರದೇ ಇರಬಹುದು ಎಂದು ಎಲ್ಲರೂ ಭಾವಿಸಿದ್ದರು. ಅಂದುಕೊಂಡಿರುವ ಪ್ರಾಜೆಕ್ಟ್ ಗಳನ್ನೆಲ್ಲ ಮುಗಿಸಿ ಕೆಜಿಎಫ್ ಮೂರನೇ ಭಾಗ ತೆರೆಕಾಣಲು ಬಹಳ ಸಮಯ ಹಿಡಿಯುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಪ್ರಶಾಂತ್ ನೀಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಕೆಜಿಎಫ್ 3 ಬಗ್ಗೆ ಆಸಕ್ತಿದಾಯಕ ಅಪ್ಡೇಟ್ ನೀಡಿದ್ದಾರೆ. ಮೂರನೇ ಭಾಗದ ಸ್ಕ್ರಿಪ್ಟ್ ರೆಡಿ ಇದೆ ಎಂದು ಹೇಳಿದ್ದಾರೆ. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸ ಮುಗಿದಿದೆ ಎಂದಿದ್ದಾರೆ.
ಸ್ಕ್ರಿಪ್ಟ್ ವರ್ಕ್ ಕಂಪ್ಲೇಟ್ ಆಗಿದ್ದು, ಕೆಜಿಎಫ್-2 ಅಂತ್ಯದಲ್ಲಿ ಭಾಗ 3ಕ್ಕೆ ಕೆಜಿಎಫ್ 3 ಎಂದು ಟೈಟಲ್ ಇಡಲಾಗಿದೆ . ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೆ ಸಾಕಷ್ಟು ಸಿನಿಮಾ ಮಾಡಿದ್ದೇನೆ. ಅವೆಲ್ಲವೂ ಬಿಗ್ ಬಜೆಟ್ ಸಿನಿಮಾಗಳು. ಆದರೆ ಇವೆಲ್ಲಕ್ಕಿಂತ ಹೆಚ್ಚು ವೆಚ್ಚದಲ್ಲಿ ಕೆಜಿಎಫ್-3 ತಯಾರಾಗಲಿದೆ ಎಂದರು. ಈ ಸುದ್ದಿ ಕೇಳಿ ಯಶ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ರಾಕಿ ಭಾಯ್ ಆಗಿ ಮತ್ತೆ ತಮ್ಮ ನಾಯಕನನ್ನು ನೋಡಲು ಕಾಯಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿದ್ದಾರೆ. ಕೆಜಿಎಫ್ 2 ನಂತರ ಸುದೀರ್ಘ ಬ್ರೇಕ್ ತೆಗೆದುಕೊಂಡಿರುವ ಯಶ್ ಸದ್ಯ ‘ಟಾಕ್ಸಿಕ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ವರ್ಷ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ತಯಾರಿ ನಡೆಸಿದ್ದಾರೆ. ಡ್ರಗ್ಸ್ ಮಾಫಿಯಾ ಸುತ್ತ ನಡೆಯುವ ಕಥೆಯೊಂದಿಗೆ ಈ ಚಿತ್ರ ತಯಾರಾಗುತ್ತಿದೆ. ಈ ಚಿತ್ರವನ್ನು ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ.