ಕೇಂದ್ರ ಸರ್ಕಾರ ಆಂಡ್ರಾಯ್ಡ್ ಬಳಕೆದಾರರಿಗೆ ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಒಂದು ವೇಳೆ ಈ ಭದ್ರತಾ ತಂತ್ರವನ್ನು ಬಳಸದಿದ್ದರೆ ಖಂಡಿತ ದೊಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಹೇಳಿದೆ.
ಅಷ್ಟಕ್ಕೂ ಕೇಂದ್ರ ಯಾಕಾಗಿ ಈ ಎಚ್ಚರಿಕೆ ವಹಿಸಲು ಹೇಳಿದೆ. ಸೈಬರ್ ಕಳ್ಳರು ಪತ್ತೆ ಮಾಡಿದ ಮೋಸದ ಯಂತ್ರ ಯಾವುದು? ಒಂದು ವೇಳೆ ಈ ಮೋಸಕ್ಕೆ ಬಲಿಯಾದರೆ, ಏನು ಮಾಡುವುದು, ಕೇಂದ್ರ ನೀಡಿದ ಭದ್ರತಾ ತಂತ್ರ ಏನು? ಕೇಂದ್ರ ಸರ್ಕಾರವು ಇತ್ತಿಚೇಗೆ ಎಲ್ಲ ಆಂಡ್ರಾಯ್ಡ್ ಬಳಕೆದಾರರಿಗೆ ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಲಕ್ಷಾಂತರ ಆಂಡ್ರಾಯ್ಡ್ ಬಳಕೆದಾರರಿಗೆ ಹೊಸ ಭದ್ರತಾ ಎಚ್ಚರಿಕೆಯನ್ನು ನೀಡಿದೆ. ನಿಮ್ಮ ಸೂಕ್ಷ್ಮ ಮಾಹಿತಿಯನ್ನು ಪಡೆಯಲು ಮತ್ತು ನಿಮ್ಮ ಫೋನ್ನಲ್ಲಿ ಅನಿಯಂತ್ರಿತ ಕೋಡ್ಗಳನ್ನು ತರುವ ಮೂಲಕ ಸೈಬರ್ ಕಳ್ಳರು ನಿಮ್ಮ ವೈಯಕ್ತಿಕ ಡೇಟಾಗಳನ್ನು ಪಡೆಯಲು ಹೊಸ ಯಂತ್ರವನ್ನು ಹುಡುಕ್ಕಿದ್ದಾರೆ.
CERT-In ನಿಂದ ನೀಡಿದ ಭದ್ರತಾ ಬುಲೆಟಿನ್ ಪ್ರಕಾರ, ಸೈಬರ್ ಕಳ್ಳರು ಫ್ರೇಮ್ವರ್ಕ್, ಸಿಸ್ಟಮ್, Google Play ಸಿಸ್ಟಮ್, RM ಘಟಕಗಳು, MediaTek ಘಟಕಗಳು, ಇಮ್ಯಾಜಿನೇಶನ್ ಘಟಕಗಳು, Qualcomm ಕಾಂಪೊನೆಂಟ್ಗಳು ಮತ್ತು Qualcomm ಕ್ಲೋಸ್-ಸೋರ್ಸ್ಡ್ ಕಾಂಪೊನೆಂಟ್ಗಳಲ್ಲಿ ಇದನ್ನು ಅಳವಡಿಸಿದ್ದಾರೆ. ಇದು ಆಂಡ್ರಾಯ್ಡ್ ಆವೃತ್ತಿ 12, 12L, 13, ಮತ್ತು 14 ರ ಮೇಲೆ ಪರಿಣಾಮ ಬೀರುತ್ತವೆ.
ಇನ್ನು ನಮ್ಮ ಭಾರತದಲ್ಲಿ ಈ ಆವೃತ್ತಿ ಫೋನ್ಗಳನ್ನು ಬಳಕೆ ಮಾಡುವವರ ಸಂಖ್ಯೆ 10 ಮಿಲಿಯನ್ಗಿಂತಲೂ ಹೆಚ್ಚಿದೆ ಎಂದು ಹೇಳಲಾಗಿದೆ. Samsung, Realme, OnePlus, Xiaomi ಮತ್ತು Vivo ನಂತಹ ಬ್ರ್ಯಾಂಡ್ಗಳು ಈ ಸಮಸ್ಯೆ ಬಗ್ಗೆ ಕಾಳಜಿಯನ್ನು ವಹಿಸಬೇಕು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಒಂದು ವೇಳೆ ಇಂತಹ ಸಮಸ್ಯೆಗಳು ಕಂಡು ಬಂದರೆ ತಕ್ಷಣ ಅದರ ಬಗ್ಗೆ ಎಚ್ಚರಿಕೆಯನ್ನು ವಹಿಸಿ ಎಂದು ಕೇಂದ್ರ ಎಚ್ಚರಿಕೆ ನೀಡಿದೆ.