ತನ್ನ ಪಾಡಿಗೆ ತಾನು ಓದಿಕೊಂಡು ಜಾಲಿಯಾಗಿದ್ದ ಹುಡುಗಿಯೊಬ್ಬಳೀಗ ಮಣ್ಣಲ್ಲಿ ಮಣ್ಣಾಗಿದ್ದಾಳೆ.ತಾನು ಇಷ್ಟ ಪಟ್ಟ ಹುಡುಗನ ಜೊತೆ ಮದುವೆಯಾಗೋ ಕನಸು ಕಂಡಿದ್ದ ಹುಡುಗಿ ಏಕಾಏಕಿ ಹೆಣವಾಗಿದ್ದಾಳೆ. ಮುಸ್ಲಿಂ ವ್ಯಕ್ತಿಯೊಬ್ಬ ಕಾಲ್ ಮಾಡಿ ಟಾರ್ಚರ್ ಮಾಡಿದ ಹಿನ್ನಲೆ ಯುವತಿ ನೇಣಿಗೆ ಶರಣಾಗಿದ್ದಾಳೆ ಎಂಬ ಆರೋಪ ಈಗ ಹಾವೇರಿ ಜಿಲ್ಲೆಯಾದ್ಯಂತ ದೊಡ್ಡ ಸುದ್ದಿಯಾಗಿದೆ.
ಮನೆಯಲ್ಲಿ ಬಡತನ ಇದ್ರೂ ಓದೋ ಹುಮ್ಮಸ್ಸಿಗೇನೂ ಕಡಿಮೆ ಇರಲಿಲ್ಲ. ಆ ಯುವತಿ ನೂರಾರು ಕನಸು ಕಂಡಿದ್ದಳು. ಮನೆಯವರನ್ನು ಒಪ್ಪಿಸಿ ತಾನು ಪ್ರೀತಿಸಿದ ಹುಡುಗನ ಜೊತೆ ಮದುವೆಯಾಗಿ ಬಾಳಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದಳು. ಆದರೆ ಆ ಕನಸು ಆಸೆಗಳು ಈಡೇರಲೇ ಇಲ್ಲ. ತಾನಿದ್ದ ಹಾಸ್ಟೆಲ್ ನಲ್ಲೇ ನೇಣಿಗೆ ಶರಣಾಗಿ ಒದ್ದಾಡಿ ಜೀವ ಬಿಟ್ಟಿದ್ದಾಳೆ. ಅಷ್ಟಕ್ಕೂ ಹೀಗೆ ನೇಣು ಹಾಕಿಕೊಂಡು ಜೀವ ಬಿಟ್ಟ ಈ ಯುವತಿ ಹೆಸರು ಶಿಲ್ಪಾ. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕು ಚಿಕ್ಕಮಲ್ಲೂರು ಗ್ರಾಮದ ಯುವತಿ. ಬಡ ದಲಿತ ಕುಟುಂಬದ ಯುವತಿ ಶಿಲ್ಪಾ ಪ್ರತಿಭಾವಂತೆ. ಓದೋದ್ರಲ್ಲಿ ಎತ್ತಿದ ಕೈ. ಬೆಳಗಾವಿಯಲ್ಲಿ ಬಿಸಿಎ ವಿಧ್ಯಾಭ್ಯಾಸ ಮಾಡ್ತಿದ್ದ ಶಿಲ್ಪಾಗೆ 22 ವರ್ಷ ವಯಸ್ಸು. ಕಳೆದ ಏಪ್ರೀಲ್ 12 ರಂದು ಬೆಳಿಗ್ಗೆ ಬೆಳಗಾವಿಯಲ್ಲಿ ತಾನಿದ್ದ ಹಾಸ್ಟೆಲ್ ನಲ್ಲಿಯೇ ನೇಣಿಗೆ ಶರಣಾಗಿದ್ಲು. ಪ್ರಾರಂಭದಲ್ಲಿ ಶಿಲ್ಲಾ ಆತ್ಮಹತ್ಯೆಗೆ ಕಾರಣ ತಿಳಿದುಬಂದಿರಲಿಲ್ಲ. ಆದರೆ ಮುಸ್ಲಿಂ ವ್ಯಕ್ತಿಯ ಟಾರ್ಚರ್‌ಗೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರೋ ವಿಚಾರ ಈಗ ಬಯಲಾಗಿದೆ.ಪ್ರಮೋದ್ ಮುತಾಲಿಕ ಕುಟುಂಬ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ ನಮಗೆ ಏನೋ ಗೊತ್ತಿಲ್ಲ. ತಪ್ಪಿದಸ್ತರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ದಲಿತ ಯುವತಿ ಶಿಲ್ಪಾ ಆತ್ಮಹತ್ಯೆ ಹಿಂದಿನ ಕಾರಣ ಬಹಿರಂಗವಾಗಿದೆ. ಶಿಲ್ಪಾ ಶಿಗ್ಗಾಂವಿ ಪಟ್ಟಣದ ನವೀನ್ ಎಂಬ ಯುವಕನ ಜೊತೆ ಲವ್ ನಲ್ಲಿದ್ದಳು.ನವೀನ್ ಶಿಗ್ಗಾಂವಿಯ ಫರ್ನಿಚರ್ ಅಂಗಡಿಯೊಂದರಲ್ಲಿ ಕೆಲಸ ಮಾಡ್ತಿದ್ದ.ಫರ್ನಿಚರ್ ಅಂಗಡಿ ಮಾಲೀಕನೇ ರಂಜಾನ್ ನದಾಫ್.ಕೆಲ ದಿನಗಳ ಹಿಂದಷ್ಟೇ ನವೀನ್ ಮೇಲೆ ಫರ್ನಿಚರ್ ಅಂಗಡಿಯಲ್ಲಿ ಕಳ್ಳತನ ಮಾಡಿದ ಆರೋಪ ಕೇಳಿ ಬಂದಿತ್ತು.ನವೀನ್ ಮೇಲೆ ಸಿಟ್ಟಾಗಿದ್ದ ಅಂಗಡಿ ಮಾಲೀಕ ರಂಜಾನ್ ನದಾಫ್ ನವೀನ್ ಮೊಬೈಲ್ ಕಸಿದುಕೊಂಡಿದ್ದ.ಮೊಬೈಲ್ ನೋಡಿದಾಗ ನವೀನ್ ಶಿಲ್ಪಾ ಜೊತೆ ಚಾಟಿಂಗ್ ಮಾಡಿರೋದು ಗೊತ್ತಾಗಿದೆ.ನವೀನ್ ಮೊಬೈಲ್ ನಲ್ಲಿದ್ದ ಶಿಲ್ಪಾ ನಂಬರ್ ತಗೊಂಡು ರಂಜಾನ್ ನದಾಫ್ ಶಿಲ್ಪಾಗೆ ಕರೆ ಮಾಡಿ ಟಾರ್ಚರ್ ಮಾಡಿದ್ದ.ನವೀನ್ ನಿನಗೆ ದುಡ್ಡು ಕಳಿಸಿದ್ದಾನೆ, ನಿಮಗೆ ದುಡ್ಡು ಎಲ್ಲಿಂದ ಬಂತು?
ನಮ್ಮ ಫರ್ನಿಚರ್ ಅಂಗಡಿಯಲ್ಲಿ ಕಳ್ಳತನ ಮಾಡಿ ನವೀನ್ ನಿನಗೆ ಹಣ ಕಳಿಸಿದ್ದಾನೆ.ಇದನ್ನು ಬಹಿರಂಗ ಮಾಡ್ತೀನಿ,ನಿಮ್ ತಂದೆ ತಾಯಿಗೂ ಹೇಳ್ತೀನಿ ಎಂದು ಬ್ಲಾಕ್ ಮೇಲ್ ಮಾಡಿದ್ದಾನೆ ಎನ್ನಲಾಗಿದೆ.ಈ ಬಗ್ಗೆ ಮಾದ್ಯಮಗಳ ಮುಂದೆ ಶಿಲ್ಪಾ ಪ್ರಿಯಕರ ನವೀನ್ ಎಳೆ ಎಳೆಯಾಗಿ ಶಿಲ್ಪಾ ಆತ್ಮಹತ್ಯೆ ಕಾರಣ ಬಿಚ್ಚಿಟ್ಟಿದ್ದಾನೆ.
ಇತ್ತ ಫರ್ನಿಚರ್ ಅಂಗಡಿ ಮಾಲೀಕ ರಂಜಾನ್ ನದಾಫ್ ಬಂಧಿಸಲು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ ಆತ್ಮಹತ್ಯೆ ಮಾಡಿಕೊಂಡಿದ್ದ ಶಿಲ್ಪಾ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಪ್ರಮೋದ್ ಮುತಾಲಿಕ್ ಘಟನೆ ಕುರಿತು ಆಕ್ರೋಶ ಹೊರ ಹಾಕಿದರು.
ನವೀನ್ ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ. ನವೀನ್ ಮನೆಯಲ್ಲಿ ಬಹಳ ಬಡತನ ಇತ್ತು.ಅವರ ತಾಯಿಗೆ ಔಷಧಿ ಕೊಡಿಸಬೇಕಿತ್ತು. ನವೀನ್‌ಗೆ ರಂಜಾನ್ ನದಾಫ್ ಸ್ಯಾಲರಿನೇ ಕೊಟ್ಟಿಲ್ಲ. ಹೀಗಾಗಿ ಅಂಗಡಿಯಲ್ಲಿ ಸ್ವಲ್ಪ ವಸ್ತು ಕಳ್ಳತನ ಮಾಡಿ ತಾಯಿಗೆ ಔಷಧಿ ಕೊಡಿಸಿದ್ದಾನೆ. ಅದಕ್ಕಾಗಿಯೇ ನವೀನ್‌ಗೆ ಹೊಡೆದು ಬಡೆದು ರಂಜಾನ್ ಪೊಲೀಸ್ ಕಂಪ್ಲೇಂಟ್ ಮಾಡಿದ್ದಾನೆ.
ನವೀನ್ ಮೊಬೈಲ್ ಕಸಿದುಕೊಂಡು ಅದರಲ್ಲಿ ಶಿಲ್ಪಾ ನಂಬರ್ ತಗೊಂಡು ಟಾರ್ಚರ್ ಮಾಡಿದ್ದಾನೆ.ಇದರಿಂದ ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದಾಳೆ.ರಂಜಾನ್ ನದಾಫ್‌ನನ್ನು ಒದ್ದು ಒಳಗೆ ಹಾಕಿ ಎಂದು ಆಗ್ರಹಿಸಿದ್ದಾರೆ.
ಶಿಲ್ಪಾ ಆತ್ಮಹತ್ಯೆ ಪ್ರಕರಣದಲ್ಲಿ ರಂಜಾನ್ ನದಾಫ್ ನಿಜಕ್ಕೂ ತಪ್ಪು ಮಾಡಿದ್ದಾನಾ? ಎಂಬ ಬಗ್ಗೆ ತನಿಖೆಯಿಂದಲೇ ಸತ್ಯ ಹೊರಬರಬೇಕಿದೆ.