ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನ ಶೇಷಾದ್ರಿಪುರಂ ಪೊಲೀಸರು ವಿಶೇಷ ಕಾರ್ಯಾಚರಣೆ ಮಾಡಿ ಬಂಧಿಸಿದ್ದಾರೆ. ನಾಸೀರ್ ಬೈಲ್, ಹಿಮಾನ್ಸು ಬಂಧಿತ ಆರೋಪಿಗಳು. ಬಂಧಿತ ನಾಸೀರ್ ಶಿವಾಜಿ ನಗರದ ರೌಡಿಶೀಟರ್ ಹಾಗೂ ಹಿಮಾನ್ಸು ಓರಿಸ್ಸಾ ಮೂಲದವನು ಎಂದು ತಿಳಿದುಬಂದಿದೆ. ರೈಲಿನ ಮೂಲಕ ಗಾಂಜಾ ತರಿಸುತ್ತಿದ್ದ ಆರೋಪಿಗಳು ವಿದ್ಯಾರ್ಥಿಗಳು, ಪರಿಚಯಸ್ಥರಿಗೆ ಗಾಂಜಾ ಮಾರಾಟ ಮಾಡುತಿದ್ದರು. ಬಂಧಿತರಿಂದ 8.9 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.