ಇತ್ತೀಚಿಗೆ ಕರ್ನಾಟಕ ಕೇಳುಗ ರಸಿಕರನ್ನ ಬಿಟ್ಟು ಹೊರಟ ಖ್ಯಾತ ನಿರೂಪಕಿ ಅಪರ್ಣ ಕೊನೆದಾಗಿ ಬಣ್ಣ ಹಚ್ಚಿದ ಸಿನಿಮಾ ದೊಡ್ಮನೆ ಸ್ಟಾರ್ ವಿನಯ್ ರಾಜಕುಮಾರ್ ಅಭಿನಯದ ಗ್ರಾಮಾಯಣದಲ್ಲಿ. ಈ ಸಿನಿಮಾದಲ್ಲಿ ಅಪರ್ಣ ವಿನಯ್ ರಾಜಕುಮಾರ್ ಅವರ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾದಲ್ಲಿ ಅಪರ್ಣ ಭಾಗದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಡಬ್ಬಿಂಗ್ ಮಾತ್ರ ಬಾಕಿ ಇತ್ತು. ಹಾಗಾದ್ರೆ ಸಿನಿಮಾದಲ್ಲಿನ ಅಪರ್ಣ ಅವರ ಪಾತ್ರಕ್ಕೆ ಬೇರೊಬ್ಬರು ಡಬ್ಬಿಂಗ್ ಮಾಡ್ತಾರಾ? ತಮ್ಮ ಅದ್ಭುತ ಕಂಠದ ಮೂಲಕ ಕನ್ನಡಿಗರ ಮನೆಮಾತದ ಅಪರ್ಣ ಅವ್ರ ಪಾತ್ರಕ್ಕೆ ಬೇರೆಯವರು ಕಂಠದಾನ ಮಾಡ್ತಾರಾ? ಎಂತ ವಿಪರ್ಯಾಸ ಅಲ್ವಾ? ಆದ್ರೆ ಶೂಟಿಂಗ್ ಸಂದರ್ಭದಲ್ಲಿ ಅಪರ್ಣ ಅವರ ಧ್ವನಿ ರೆಕಾರ್ಡ್ ಆಗಿರೋದನ್ನೇ ಬಳಸಿ, ನವೀನ ತಂತ್ರಜ್ಞಾನದ ಸಹಾಯದಿಂದ ಅದೇ ವಾಯ್ಸ್ ಜೊತೆಗೆ ತೆರೆಗೆ ತರುವ ಪ್ರಯತ್ನದಲ್ಲಿದೆ ಗ್ರಾಮಾಯಣ ಚಿತ್ರತಂಡ.
ದೇವನೂರು ಚಂದ್ರು ಆಕ್ಷನ್ ಕಟ್ ಹೇಳ್ತಿರೋ ಗ್ರಾಮಾಯಣ ಸಿನಿಮಾದಲ್ಲಿ ವಿನಯ್ ರಾಜಕುಮಾರ್ ಮೊದಲ ಬಾರಿಗೆ ಹಳ್ಳಿ ಯುವಕನ ಪಾತ್ರದಲ್ಲಿ ಮಿಂಚಿದ್ದಾರೆ. ಇವರ ತಾಯಿ ಪಾತ್ರದಲ್ಲಿ ಅಪರ್ಣ ಹೇಗೆ ಕಾಣ್ತಾರೆ ಅನ್ನೋದಕ್ಕೆ ಒಂದು ಸ್ಯಾಂಪಲ್ ಹಂಚಿಕೊಂಡಿದೆ ಚಿತ್ರತಂಡ. ಅಪರ್ಣ ಅಭಿಮಾನಿಗಳಿಗೆ ಅವರ ಅಗಲಿಕೆ ನಂತ್ರ ಸಿನಿಮಾ ಮೂಲಕ ಅವ್ರನ್ನ ಮತ್ತೊಮ್ಮೆ ಕಣ್ತುಂಬಿಕೊಳ್ಳೋ ಅವಕಾಶ ಗ್ರಾಮಾಯಣದಿಂದ ಆಗ್ತಾ ಇದೆ.