ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಇಂದು ದ್ವಿತೀಯ ಪಿಯುಸಿ ಪರೀಕ್ಷೆ- 3ರ ರಿಸಲ್ಟ್ ಅನ್ನು ಪ್ರಕಟಣೆ ಮಾಡಿದೆ. ಜೂನ್ 25 ರಿಂದ ಜುಲೈ 5ರವರೆಗೆ ಈ ಪರೀಕ್ಷೆ- 3 ಅನ್ನು ನಡೆಸಲಾಗಿತ್ತು. ಇದರಲ್ಲೂ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆ-3ರ ಎಕ್ಸಾಂಗೆ ಒಟ್ಟು 76,005 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಜೂ.25ರಿಂದ ಜು.5 ರವರೆಗೆ ಅಂದರೆ 10 ದಿನಗಳ ಕಾಲ ನಡೆಸಲಾಗಿದ್ದ ಈ ಪರೀಕ್ಷೆಗೆ 75,466 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 17,911 ವಿದ್ಯಾರ್ಥಿಗಳು ಸದ್ಯ ಪಾಸ್ ಆಗಿದ್ದಾರೆ. ಶೇಕಡಾ 21.65 ಬಾಲಕರು ಉತ್ತೀರ್ಣರಾಗಿದ್ರೆ, ಶೇಕಡಾ 26.55 ರಷ್ಟು ಬಾಲಕಿಯರು ಉತೀರ್ಣರಾಗಿದ್ದಾರೆ. ಬಾಲಕರಿಗಿಂತ ಬಾಲಕಿಯರೇ ಹೆಚ್ಚಿನ ಮಟ್ಟದಲ್ಲಿ ಪಾಸ್ ಆಗಿದ್ದು ಮತ್ತೊಮ್ಮೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.