ದೆಹಲಿ ಮೆಟ್ರೋದಲ್ಲಿ ಮಹಿಳೆಯರು ಮೇಕ್ಅಪ್ ಮಾಡುವ ವೈರಲ್ ವೀಡಿಯೊ ಎಲ್ಲೆಡೆ ಹರಿದಾಡುತ್ತಿದೆ. ಇದು ಮನೆಯಿಂದ ಬೇಗ ಕೆಲಸಕ್ಕೆ ಹೊರಡುವ ಯುವತಿಯರ ಈ ಸಮಯ ನಿರ್ವಹಣೆ ಮತ್ತು ಪ್ರಯಾಣದ ಎಂಜಾಯ್ ಬಗ್ಗೆ ಆನ್ಲೈನ್ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ದೆಹಲಿ ಮೆಟ್ರೋ ಜನರು ಮತ್ತು ಅನುಭವಗಳ ವೈವಿಧ್ಯಮಯ ಕೇಂದ್ರವಾಗಿದೆ. ಇದರಲ್ಲಿ ಆಗಾಗ ಅಸಾಮಾನ್ಯ ಘಟನೆಗಳು ಕೂಡ ನಡೆಯುತ್ತಿರುತ್ತದೆ.
ದೆಹಲಿ ಮೆಟ್ರೋದಲ್ಲಿ ಯುವತಿಯರಿಬ್ಬರು ಹರಟುತ್ತಾ ಕುಳಿತು ಮುಖಕ್ಕೆ ಮೇಕ್ಅಪ್ ಮಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಯುವಕರು ಆ ಮೇಕಪ್ ವಿಡಿಯೋ ನೋಡಿ ಉಸ್ಸಪ್ಪಾ ಎಂದಿದ್ದಾರೆ.
ಕೆಲವೊಮ್ಮೆ ಮೆಟ್ರೋ ರೈಲಿನಲ್ಲಿ ಹಾಡು, ರೀಲ್ಸ್, ಡ್ಯಾನ್ಸ್ ಮುಂತಾಧ ಮನರಂಜನೆ ಕೂಡ ಸಿಗುತ್ತದೆ. ಇದೀಗ ಇಬ್ಬರು ಮಹಿಳೆಯರು ಮೆಟ್ರೋದಲ್ಲಿ ಮೇಕಪ್ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಈ ವೀಡಿಯೊದಲ್ಲಿ, ಯುವತಿಯರಿಬ್ಬರು ಭಾಗಶಃ ಖಾಲಿ ಇರುವ ಮೆಟ್ರೋದಲ್ಲಿ ಕುಳಿತಿರುವುದು ಕಂಡುಬರುತ್ತದೆ. ಅದೇ ಅವಕಾಶವನ್ನು ಬಳಸಿಕೊಂಡು ಅವರು ಮೇಕ್ಅಪ್ ಕಿಟ್ ತೆಗೆದು ಮುಖಕ್ಕೆ ಮೇಕಪ್ ಹಚ್ಚಿಕೊಳ್ಳಲು ಶುರು ಮಾಡಿಕೊಂಡು, ತಮ್ಮದೇ ಲೋಕದಲ್ಲಿ ಮುಳುಗಿದ್ದಾರೆ.