ಮಳೆಗಾಲದಲ್ಲಿ ನಾಲಿಗೆಗಳು ರುಚಿ ರುಚಿಯಾದ, ಬಿಸಿ ಬಿಸಿಯಾದ ಆಹಾರಗಳನ್ನು ಬಯಸುತ್ತವೆ. ಪಾನಿಪೂರಿ, ಮಸಾಲೆಪೂರಿ, ಗೋಬಿ ಮಂಚೂರಿಗಳ ಜೊತೆಗೆ ಇನ್ನೂ ಕೆಲವು ಅನಾರೋಗ್ಯಕರ ತಿಂಡಿಗಳ ಪಟ್ಟಿಗೆ ಸೇರುವುದು ಮೊಮೊಸ್. ಇದನ್ನು ತಿನ್ನುವುದರಿಂದ ಎಷ್ಟೆಲ್ಲಾ ಸಮಸ್ಯೆಗಳಿವೆ ಗೊತ್ತಾ?
ಸರಿಯಾಗಿ ಅಗಿಯುವುದು ಮುಖ್ಯ:
ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ಆಸ್ಪತ್ರೆಯ AIIMS ನಿಂದ ಪ್ರಕರಣವನ್ನು ಉಲ್ಲೇಖಿಸಿ, ಒಬ್ಬ ವ್ಯಕ್ತಿ ಮೊಮೊಸ್ ತಿನ್ನುವಾಗ ಉಸಿರುಗಟ್ಟಿ ಸತ್ತನು. ಏಕೆಂದರೆ ಅದು ಅವನ ಮೇಲಿನ ಶ್ವಾಸನಾಳದಲ್ಲಿ ಸಿಲುಕಿಕೊಂಡಿತು. ಹಾಗಾಗಿ, ಅಹಾರವನ್ನು ಚೆನ್ನಾಗಿ ಅಗಿಯುವುದು ಬಹಳ ಮುಖ್ಯ.
ದುರ್ಬಲ ಜೀರ್ಣಾಂಗ ವ್ಯವಸ್ಥೆ;
ಮಳೆಗಾಲವು ಹೆಚ್ಚಿದ ಆದ್ರ್ರತೆ ಮತ್ತು ವಾತಾವರಣದ ತೇವಾಂಶದಿಂದ ಕೂಡಿರುವುದರಿಂದ, ಈ ಸಮಯದಲ್ಲಿ, ಜೀರ್ಣಕಾರಿ ಬೆಂಕಿ (ಅಗ್ನಿ) ತುಲನಾತ್ಮಕವಾಗಿ ದುರ್ಬಲವಾಗಿರುತ್ತದೆ, ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಅಸಮತೋಲನಕ್ಕೆ ಹೆಚ್ಚು ದುರ್ಬಲಗೊಳಿಸುತ್ತದೆ.
ಮೊಮೊಗಳನ್ನು ಅತ್ಯಂತ ಶೀತ ಹವಾಮಾನಕ್ಕಾಗಿ ತಯಾರಿಸಲಾಗುತ್ತದೆ, ಅಂದರೆ ಪರ್ವತ, ಗುಡ್ಡದ ತಪ್ಪಲಿನಲ್ಲಿ ವಾಸಿಸುವ ಜನರಿಗೆ ಥಂಡಿ ಹವಾಮಾನವನ್ನು ತಡೆದುಕೊಳ್ಳಲು ಹೆಚ್ಚಿನ ಕೊಬ್ಬಿನ ಸೇವನೆಯ ಅಗತ್ಯವಿರುತ್ತದೆ. ಆದರೆ, ಜಡ ಜೀವನಶೈಲಿಯನ್ನು ಹೊಂದಿರುವ ನಗರದ ಜನರು ಇದನ್ನು ಸೇವಿಸದಾಗ ಬಹಳಷ್ಟು ಆರೋಗ್ಯ ಅಪಾಯಗಳಿಗೆ ಕಾರಣವಾಗಬಹುದು.
ಬಳಸುವ ಹಿಟ್ಟು
ಮೊಮೊಗಳನ್ನು ಮೈದಾದಿಂದ ತಯಾರಿಸಲಾಗುತ್ತದೆ, ಇದು ಗೋಧಿ ಹಿಟ್ಟಿನ ಅತ್ಯಂತ ಸಂಸ್ಕರಿಸಿದ ರೂಪವಾಗಿದ್ದು, ಗೋಧಿಯ ಹೆಚ್ಚಿನ ಅಗತ್ಯ ಪೋಷಕಾಂಶಗಳನ್ನು (97 ಪ್ರತಿಶತ ಫೈಬರ್ ಸೇರಿದಂತೆ) ಕಳೆದುಕೊಳ್ಳಲು ಕಾರಣವಾಗುತ್ತದೆ.
ಬೀಚ್ ಮಾಡಿರುತ್ತಾರೆ
ಮೈದಾವು ಸಾಮಾನ್ಯವಾಗಿ ಮೃದು ಹಾಗೂ ಹೊಳೆಯುವಂತೆ ಮಾಡಲು ಬೀಚ್ ಮತ್ತು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇವುಗಳು ದೇಹಕ್ಕೆ ತುಂಬಾ ವಿಷಕಾರಿ ಮತ್ತು ಅನಾರೋಗ್ಯಕರ. ಸ್ಫೂಲಕಾಯತೆ, ಮಧುಮೇಹ ಸಮಸ್ಯೆಗಳನ್ನು ಪ್ರಚೋದಿಸುವ ಪ್ರಮುಖ ಆಹಾರ ಪದಾರ್ಥಗಳಲ್ಲಿ ಮೈದಾ ಒಂದಾಗಿದೆ.
ಬಳಸುವ ಪದಾರ್ಥಗಳು
ಅದನ್ನು ತಿನ್ನಲು ಬಳಸುವ ಸಾಸ್ ಅಥವಾ ಡಿಪ್ನ್ನು ವಾಣಿಜ್ಯಕವಾಗಿ ತಯಾರಿಸಿದ ಮೆಣಸಿನ ಪುಡಿಗಳ ಭಾರೀ ಬಳಕೆಯಿಂದ ತಯಾರಿಸಲಾಗುತ್ತದೆ, ಇದು ರಕ್ತಸ್ರಾವದ ಮೂಲವ್ಯಾಧಿ ಅಥವಾ ಪೈಲ್ಸ್ ಅನ್ನು ಪ್ರಚೋದಿಸುತ್ತದೆ.
ತಯಾರಿಸುವಿಕೆ
ಕಳಪೆ ಬೇಯಿಸಿದ ಎಲೆಕೋಸುಗಳು ಮತ್ತು ಕ್ಯಾರೆಟ್ಗಳು ಮತ್ತು ಮಾಂಸವನ್ನು ಬಳಸುವ ಸಾಧ್ಯತೆ ಇರುತ್ತದೆ, ಇದು ಹೊಟ್ಟೆಯ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ದೇಹದಲ್ಲಿ ಹುಳುಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.
ಚೆನ್ನಾಗಿ ಅಗಿಯಿರಿ
ಮೊಮೊಸ್ ಅಥವಾ ಇತರ ಯಾವುದೇ ಘನ ಅಥವಾ ಇತರ ಆಹಾರ ಪದಾರ್ಥಗಳನ್ನು ತಿನ್ನುತ್ತಿರಲಿ, ಆಹಾರವನ್ನು ಆರಂಭದಲ್ಲಿ ಸರಿಯಾಗಿ ಅಗಿಯುವುದು ಒಳ್ಳೆಯದು, ಅದನ್ನು ನುಂಗುವ ಮೊದಲು ಕನಿಷ್ಠ 20 ರಿಂದ 25 ಬಾರಿ ಚೆನ್ನಾಗಿ ಅಗಿಯಿರಿ.